ರಾಜ್ಯ

ಕರ್ನಾಟಕದಲ್ಲಿ ಕೊರೋನಾಗೆ ಮತ್ತೊಂದು ಬಲಿ, ಸಾವಿನ ಸಂಖ್ಯೆ 14ಕ್ಕೆ, ಸೋಂಕಿತರ 384ಕ್ಕೆ ಏರಿಕೆ

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿಸಿದ್ದು, ಕೊವಿಡ್-19ಗೆ ಶನಿವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನ 42 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ. 

ಈ ಮಧ್ಯೆ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಸಂಜೆ ಮತ್ತೆ 13 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 25 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 384ಕ್ಕೇರಿಕೆಯಾಗಿದೆ. ಆದರೆ, ಅದರ ಬೆನ್ನಲ್ಲೇ ಸಿಹಿ ಸುದ್ದಿಯೊಂದು ದೊರೆತಿದೆ. ಅದೆಂದರೆ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶತಕ ದಾಟಿದೆ. ಅಂದರೆ 104 ಜನರು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 14 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಕಲಬುರಗಿಯ 34 ವರ್ಷದ ವ್ಯಕ್ತಿ, ಇಲ್ಲಿನ ಶಹಾಬಾದ್ ನ 16 ವರ್ಷದ ಬಾಲಕ, ವಿಜಯಪುರದ 60 ವರ್ಷದ ವೃದ್ಧ, ಹುಬ್ಬಳ್ಳಿ, ಧಾರವಾಡದ 63 ವರ್ಷದ ವೃದ್ಧ,ಬೆಳಗಾವಿ ಹಿರೇಬಾಗೇವಾಡಿಯಲ್ಲಿ 45ವರ್ಷದ ವ್ಯಕ್ತಿ, ಮೈಸೂರು ನಂಜನಗೂಡಿನಲ್ಲಿ 30 ಹಾಗೂ 50 ವರ್ಷದ ವ್ಯಕ್ತಿಗಳು, ಬಾಗಲಕೋಟೆಯ 48 ಮಹಿಳೆಯರು ಹಾಗೂ 65 ವರ್ಷದ ವ್ಯಕ್ತಿ, ಮೈಸೂರಿನ 65 ವರ್ಷದ ವೃದ್ಧ, ಗದಗದ 42 ವರ್ಷದ ವ್ಯಕ್ತಿ ಹಾಗೂ ಮಂಡ, ಮಳವಳ್ಳಿಯ 39 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. 

ಮಂಡ್ಯ ಮಳವಳ್ಳಿಯ 39 ವರ್ಷದ ಗಂಡು, ಬಾಗಲಕೋಟೆಯ 32, 32 ವರ್ಷದ ವ್ಯಕ್ತಿ, ವಿಜಯಪುರದ 32,ಮೈಸೂರು ನಂಜನಗೂಡಿನ 26 ವರ್ಷದ ಮಹಿಳೆ, ಬೆಂಗಳೂರು ನಗರದ 55, 50, 21 ವರ್ಷದ ಮಹಿಳೆಯರು, ಬಾಗಲಕೋಟೆಯ 43, 43, 47 ವರ್ಷದ ಪುರುಷರು, ಮೈಸೂರು ನಂಜನಗೂಡಿನ 30, 36 ಮತ್ತು 28 ವರ್ಷದ ಪುರುಷರು ಸೋಂಕಿಗೆ ಗುರಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

SCROLL FOR NEXT