ರಾಜ್ಯ

ಉಪ್ಪು, ಅರಿಶಿಣ ಬಿಸಿನೀರಿನಿಂದ ಬಾಯಿ ಮುಕ್ಕಳಿಸಿದರೆ ಕೊರೋನಾ ನಿವಾರಣೆಯಾಗುತ್ತದೆ ಎಂದು ಹೇಳಿಲ್ಲ.. ಆದರೆ: ಬಿ ಶ್ರೀರಾಮುಲು

Srinivasamurthy VN

ಬೆಂಗಳೂರು: ಉಪ್ಪು, ಅರಿಶಿಣ ಬಿಸಿನೀರಿನಿಂದ ಬಾಯಿ ಮುಕ್ಕಳಿಸಿದರೆ ಕೊರೋನಾ ನಿವಾರಣೆಯಾಗುತ್ತದೆ ಎಂದು ಹೇಳಿಲ್ಲ.. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಚಿವ ಬಿ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ವೈರಸ್ ನಿರ್ವಹಣೆ ಕುರಿತಂತೆ ಸಚಿವ ಬಿ ಶ್ರೀರಾಮುಲು ನೀಡಿದ್ದ ಆರೋಗ್ಯ ಸಲಹೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಇಡೀ ವಿಶ್ವವೇ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಪರದಾಡುತ್ತಿದ್ದರೆ,. ಕರ್ನಾಟಕದ ಸಚಿವ ಬಿ ಶ್ರೀರಾಮುಲು ಮನೆ ಮದ್ದು ಕಂಡು  ಹಿಡಿದಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಬಿ ಶ್ರೀರಾಮುಲು ಅವರು, 'ಉಪ್ಪು ಮತ್ತು ಅರಿಶಿನವನ್ನು  ಪ್ರಾಚೀನ ಕಾಲದಿಂದಲೂ ಆಯುರ್ವೇದ ಹಾಗೂ ಚೀನಾ ವೈದ್ಯಕೀಯ ಪದ್ದತಿಯಲ್ಲಿ  Anti biotic ಆಗಿ ಬಳಸಲಾಗಿದೆ. ಅದನ್ನು ಉಲ್ಲೇಖಿಸಿ ಉಪ್ಪು ಹಾಗೂ ಅರಿಶಿನವನ್ನು ಬಿಸಿ  ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸುವುದು ಒಂದು ಬಗೆಯ  ಆರೋಗ್ಯ ಸುರಕ್ಷಾ ಕ್ರಮವೆಂದು ಹೇಳಿದ್ದೇನೆ ಹೊರತು ಅದರಿಂದ ಕೊರೋನಾ ನಿವಾರಣೆಯಾಗುತ್ತದೆ ಎಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಇದೇ ಶ್ರೀರಾಮುಲು ಅವರು ಸೂರ್ಯನ ಅನುಗ್ರಹದಿಂದ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪ್ರಮಾಣ ನಿಯಂತ್ರಣದಲ್ಲಿದೆ. ಸೂರ್ಯನ ಶಾಖಕ್ಕೆ ಕೊರೋನಾ ವೈರಸ್ ಗಳು ನಿರ್ನಾಮವಾಗುತ್ತದೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದರು.

SCROLL FOR NEXT