ರಾಜ್ಯ

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಚಿವ ಎಸ್.ಟಿ ಸೋಮಶೇಖರ್: ವ್ಯಾಪಕ ಟೀಕೆ

Shilpa D

ರಾಮನಗರ: ಎಪಿಎಂಸಿ ಮಾರುಕಟ್ಟೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ನೀಡಿ, ಮಾರ್ಕೆಟ್​ನ ಸ್ಥಿತಿಗತಿ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.  ಬೆಳಂಬೆಳಗ್ಗೆಯೇ ಅಧಿಕಾರಿಗಳ ಜೊತೆಗೆ ಮಾರ್ಕೆಟ್ ರೌಂಡ್ಸ್ ಮಾಡಿದರು. 

ಮಾರ್ಕೆಟ್​ನ ವ್ಯಾಪಾರಸ್ಥರ ಜೊತೆಗೆ ಸಚಿವರು ಕೆಲಕಾಲ ಮಾತುಕತೆ ನಡೆಸಿದರು. ಆದರೆ ಈ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾದರೆಂಬ ಟೀಕೆ ವ್ಯಕ್ತವಾಗಿದೆ.

ರೈತರ ಬೆಳೆ ಖರೀದಿಯಾಗದಿದ್ದರೆ ಸರ್ಕಾರ ಪರಿಹಾರ ಕೊಡಲಿದೆ. ಈ ಬಗ್ಗೆ ಸಿಎಂ ಕೂಡ ಕ್ರಮವಹಿಸಿದ್ದಾರೆ. ರೈತರು ಅವರ ಬೆಳೆಗಳನ್ನ ಬೆಂಗಳೂರಿನಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಲ್ಲಾ ಎಪಿಎಂಸಿ ಗಳಲ್ಲಿ ಅವರಿಗೆ ಇಂಡೆಂಟ್ ಕೊಡಬೇಕು. ರೈತರಿಗೆ ಗ್ರೀನ್ ಪಾಸ್ ಇಲ್ಲದಿದ್ದರೂ ಕೂಡ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ರೈತರಿಗೆ ಭರವಸೆ ಕೊಟ್ಟರು.

ಸಚಿನ ಸೋಮಶೇಖರ್ ಅವರು ಮಾಸ್ಕ್ ಧರಿಸಿದ್ದರು, ಆದರೆ ಅವರ ಜೊತೆಗಿದ್ದ ರೈತರು ಅವರ ಜೊತೆ ಚರ್ಚೆ ನಡೆಸುವ ವೇಳೆ ಮಾಸ್ಕ್ ಕೂಡ ಧರಿಸದೇ ಅವರ ಬಳಿ ಹೋಗಿ ಮಾತನಾಡುತ್ತಿದ್ದರು.

SCROLL FOR NEXT