ರಾಜ್ಯ

ಅಗಸ್ಟಾ ವೆಸ್ಟ್‌ಲ್ಯಾಂಡ್: ಕ್ರಿಶ್ಚಿಯನ್ ಮಿಕೆಲ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Lingaraj Badiger

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಪ್ರಕರಣದಲ್ಲಿ ಕ್ರಿಶ್ಚಿಯನ್ ಮೈಕೆಲ್‍ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

‘ಅಗಸ್ಟಾ ವೆಸ್ಟ್‌ಲ್ಯಾಂಡ್ ಖರೀದಿ ಪ್ರಕರಣದಲ್ಲಿ ಆರೋಪಿ ಕ್ರಿಶ್ಚಿಯನ್ ಮೈಕೆಲ್‍ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸುತ್ತಿದೆ.’ ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ನ್ಯಾಯಪೀಠ ಹೇಳಿದೆ.

‘ತನ್ನ ವಯಸ್ಸು 59 ವರ್ಷ ಮೀರಿದ್ದು, ಆರೋಗ್ಯ ಸರಿಯಾಗಿಲ್ಲ. ಈ ಹಿಂದೆ ಅನೇಕ ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಇದೀಗ ಜಾಮೀನು ಸಿಗದಿದ್ದರೆ ಕೊರೋನಾ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುತ್ತೇನೆ’ ಎಂದು ಮೈಕೆಲ್ ಮನವಿ ಮಾಡಿದ್ದರು.

ಇದಕ್ಕು ಮುನ್ನ ಜೈಲಿನಲ್ಲಿದ್ದಾಗ ಕೊವಿಡ್-19 ಸೋಂಕಿಗೆ ತುತ್ತಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ನಂತರ ಮೈಕೆಲ್‍ ಸುಪ್ರೀಂ ಕೋರ್ಟ್‍ ಮೆಟ್ಟಿಲೇರಿದ್ದರು. 

ಮೈಕೆಲ್ ಪ್ರಕರಣವು ‘ಮಧ್ಯಂತರ ಪರಿಹಾರ ನೀಡುವ ಮಾನದಂಡಗಳಡಿ ಬರುವುದಿಲ್ಲ.’ ಎಂಬ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‍ ಎತ್ತಿಹಿಡಿದಿದೆ.

SCROLL FOR NEXT