ರಾಜ್ಯ

ಕಲಬುರಗಿ: ಕರ್ತವ್ಯ ಲೋಪ; ಕಿರಿಯ ಇಂಜಿನಿಯರ್ ಅಮಾನತು

Srinivasamurthy VN

ಕಲಬುರಗಿ: ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೇ ಕಲಬುರಗಿ ತಾಲೂಕಿನ ಪಟ್ಟಣ ಹೋಬಳಿಯ ಸೆಕ್ಟ್ರೆಲ್ ಮೆಜಿಸ್ಟ್ರೇಟ್ ಎಂದು ಕರ್ತವ್ಯ ನಿರ್ವಹಿಸಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಲಬುರಗಿ ಉಪವಿಭಾಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಕಿರಿಯ ಇಂಜಿನಿಯರ್ ಮಲ್ಲಿಕಾರ್ಜುನ ಮಾಲಿಪಾಟೀಲ ಅವರನ್ನು ಅಮಾನತುಗೊಳಿಸಲಾಗಿದೆ.

ಏ.9 ರಂದು ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದ ಎಂಜಿನಿಯರ್ ನರೇಂದ್ರ ಕುಮಾರ್ ಇದೂವರೆಗೂ ಕೆಲಸಕ್ಕೆ ಹೋಗಿ ವರದಿ  ಮಾಡಿಕೊಂಡಿರಲಿಲ್ಲ. ಕೇಂದ್ರ ಸ್ಥಾನದಲ್ಲೂ ಇರಲಿಲ್ಲ. ಬದಲಾಗಿ ಕಚೇರಿಯ ಕಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಪಾಟೀಲರನ್ನು ಏನಧಿಕೃತವಾಗಿ ನಿಯೋಜಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. 

ಏ.7 ರಂದು ಲಾಕ್'ಡೌನ್ ನಲ್ಲಿಯೇ ಕಳೆದ ಏ.7 ರಂದು ಸಾವಳಗಿ ಶಂಕರಲಿಂಗೇಶ್ವರ ಮಂದಿರದ ರಥೋತ್ಸವ ನಡೆದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಲಬುರಗಿ ತಹಶೀಲ್ದಾರ್ ರಿಂದ ವರದಿ ಕೇಳಿದ್ದರು. ತಹಶೀಲ್ದಾರ್ ಮಲ್ಲೇಶಿ ತಂಗಾ ಈ ವಿಷಯವಾಗಿ ನೀಡಿದ ವರದಿಯಲ್ಲಿ ನರೇಂದ್ರ ಕೆಲಸಕ್ಕೆ ಹಾಜರಾಗದ ಸಂಗತಿ ಹೊರಬಿದ್ದಿತ್ತು. ಇದೀಗ ಜಿಲ್ಲಾಧಿಕಾರಿ ಶರತ್ ಹೊಸ ಆದೇಶ ಹೊರಡಿಸುವ ಮೂಲಕ ಪಟ್ಟಣ ಹೋಬಳಿಗೆ ಸೆಕ್ಟಲ್ ಮ್ಯಾಜಿಸ್ಟ್ರೇಟ್ ಆಗಿ ಡಿವೈಪಿಸಿ ವೆಂಕಯ್ಯ ಇನಾಮದಾರ್, ಪ್ರಥಮ ದರ್ಜೆ ಗುಮಾಸ್ತರಾಗಿರುವ ಸಂಗಣ್ಣ ಇವರನ್ನು ನೇಮಕ ಮಾಡಿದ್ದಾರೆ. 

SCROLL FOR NEXT