ಆಸ್ಪತ್ರೆಯೊಂದರಲ್ಲಿ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಸಿಬ್ಬಂದಿ 
ರಾಜ್ಯ

ಕೋವಿಡ್-19 ಟೆಸ್ಟ್: ರಾಜ್ಯದಲ್ಲಿ ರೋಗ ಲಕ್ಷಣ ಇಲ್ಲದಿರುವವರಿಗೆ ಕೊರೋನಾ ಪಾಸಿಟಿವ್ ಹೆಚ್ಚು!

ರಾಜ್ಯದಲ್ಲಿ ರೋಗ ಲಕ್ಷಣ ಇಲ್ಲದಿರುವವರಿಗೆ ಕೊರೋನಾ ಪಾಸಿಟಿವ್ ಹೆಚ್ಚಾಗಿ ಕಂಡುಬಂದಿದೆ.ಮಿಲಿಯನ್ ಜನಸಂಖ್ಯೆಯಲ್ಲಿ 639 ಹೆಚ್ಚಿನ ದರದ ತುಲನಾತ್ಮಕದೊಂದಿಗೆ ರಾಜ್ಯ ಟೆಸ್ಟಿಂಗ್ ದರ  ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಆದರೆ, ರಾಷ್ಟ್ರೀಯ ಟ್ರೆಂಡ್ ನಂತೆ ರಾಜ್ಯದ ಹೆಚ್ಚಿನ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ವರದಿಯಾಗಿಲ್ಲ. 

ಬೆಂಗಳೂರು: ರಾಜ್ಯದಲ್ಲಿ ರೋಗ ಲಕ್ಷಣ ಇಲ್ಲದಿರುವವರಿಗೆ ಕೊರೋನಾ ಪಾಸಿಟಿವ್ ಹೆಚ್ಚಾಗಿ ಕಂಡುಬಂದಿದೆ.ಮಿಲಿಯನ್ ಜನಸಂಖ್ಯೆಯಲ್ಲಿ 639 ಹೆಚ್ಚಿನ ದರದ ತುಲನಾತ್ಮಕದೊಂದಿಗೆ ರಾಜ್ಯ ಟೆಸ್ಟಿಂಗ್ ದರ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಆದರೆ, ರಾಷ್ಟ್ರೀಯ ಟ್ರೆಂಡ್ ನಂತೆ ರಾಜ್ಯದ ಹೆಚ್ಚಿನ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ವರದಿಯಾಗಿಲ್ಲ. 

ರಾಜ್ಯದಲ್ಲಿನ  503 ಕೋವಿಡ್-19 ಸೋಂಕು ಪ್ರಕರಣಗಳ ಪೈಕಿಯಲ್ಲಿ 362 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ, ಆದರೆ, ಶಂಕಿತ ಪ್ರಕರಣಗಳು ಹಾಗೂ ರೋಗಿಗಳೊಂದಿಗೆ ಸಂಪರ್ಕ ಹೊಂದಿರುವವರ ಪರೀಕ್ಷೆ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ.

ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಮತ್ತು ಹೆಚ್ಚಿನ ಅಪಾಯದಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರನ್ನು ಪರೀಕ್ಷಿಸಲು ರಾಪಿಡ್ ಆಂಟಿಬಾಡಿ ಟೆಸ್ಟಿಂಗ್ ಕಿಟ್‌ಗಳನ್ನು ನಿಯೋಜಿಸಲು ರಾಜ್ಯವು ಯೋಜಿಸಿತ್ತು. ಆದರೆ,  ಆರ್‌ಟಿಕೆ ಪರೀಕ್ಷೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದರಿಂದ ಈ  ಯೋಜನೆ ಸ್ಥಗಿತಗೊಂಡಿತು. 

ಸದ್ಯ, ದೇಶದ ಇತರ  ಭಾಗಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ಪ್ರಯಾಣ ಅಥವಾ ರೋಗಿಗಳೊಂದಿಗೆ ಸಂಪರ್ಕ ಹೊಂದಿರುವ ಅಥವಾ ಉಸಿರಾಟದಂತಹ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಮಾತ್ರ ವೈದ್ಯರು ಪರೀಕ್ಷಿಸುತ್ತಿದ್ದಾರೆ. 

ಪಾಸಿಟಿವ್ ಕಂಡುಬಂದಿರುವ ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸುತ್ತಿದ್ದೇವೆ. ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಟೆಸ್ಟಿಂಗ್ ರಾಜ್ಯದಲ್ಲಿ ನಡೆಯುತ್ತಿದೆ. ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ  ಪರೀಕ್ಷಾ ಘಟಕವು ಕಾರ್ಯರೂಪಕ್ಕೆ ಬಂದ ನಂತರ, ಒಂದೇ ದಿನದಲ್ಲಿ ಸುಮಾರು 1,000 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತಿದೆ.

ಮೈಸೂರು ರಸ್ತೆಯಲ್ಲಿ ದಿನಕ್ಕೆ 5,000 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವಿರುವ ಪರೀಕ್ಷಾ ಸೌಲಭ್ಯವನ್ನು ನಾವು ಸ್ಥಾಪಿಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಇನ್ನು 10 ದಿನಗಳಲ್ಲಿ ರಾಜ್ಯ ಪ್ರತಿದಿನ 10 ಸಾವಿರ ದಿಂದ 12 ಸಾವಿರ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ಅವರು ತಿಳಿಸಿದ್ದಾರೆ. 

ಭಾನುವಾರದವರೆಗೂ 42 ಸಾವಿರದ 964 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಕೇವಲ 503 ಪಾಸಿಟಿವ್ ಆಗಿವೆ. ರಾಜ್ಯದಲ್ಲಿ 100 ಟೆಸ್ಟ್ ಗಳಲ್ಲಿ ಶೇ, 1 ರಷ್ಟು ಪಾಸಿಟಿವ್ ದರ ಕಂಡಬರುತ್ತಿದೆ ಎಂದು ರಾಜ್ಯ ಕೋವಿಡ್-19 ವಾರ್ ರೂಮ್ ವಿಶ್ಲೇಷಿಸಿದೆ. ಸೋಂಕಿತರ ಪತ್ತೆ ಹಾಗೂ ಟೆಸ್ಟಿಂಗ್ ಸೂತ್ರದ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಯತ್ನಿಸಬೇಕೆಂದು ಪ್ರಧಾನಮಂತ್ರಿಗಳ ಸಲಹೆ ಸಮಿತಿಯ ಮಾಜಿ ಸದಸ್ಯರಾಗಿದ್ದ ಪ್ರೊಫೆಸರ್ ಶಮಿಕಾ ರವಿ ಸಲಹೆ ನೀಡಿದ್ದಾರೆ.

ಈ ಮಧ್ಯೆ ನಂಜನಗೂಡು, ತಭ್ಲೀಘಿ ಜಮಾತ್ ಮತ್ತು ಹೊಂಗಸಂದ್ರದಲ್ಲಿನ ವಲಸೆ ಕಾರ್ಮಿಕನಿಂದ ರಾಜ್ಯದಲ್ಲಿ ಕೋವಿಡ್ -19 ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು  ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT