ರಾಜ್ಯ

ಬೆಂಗಳೂರು: ಒಂದೇ ಒಂದು ಟ್ವೀಟ್ ಸಹಾಯದಿಂದ 12 ಯುವತಿಯರ ರಕ್ಷಣೆ

Srinivas Rao BV

ಬೆಂಗಳೂರು: ವಕೀಲರೊಬ್ಬರು ಮಾಡಿದ ಒಂದೇ ಒಂದು ಟ್ವೀಟ್ ನಿಂದ ಪೊಲೀಸರು 12 ಯುವತಿಯರನ್ನು ರಕ್ಷಿಸಲು ಸಾಧ್ಯವಾಗಿದೆ. ಆರ್ಕೆಸ್ಟ್ರಾದಲ್ಲಿ ಅವಕಾಶ ಕಲ್ಪಿಸುವುದಾಗಿ ಹೇಳಿ ಬೇರೆ ರಾಜ್ಯದ ಯುವತಿಯರನ್ನು ನಗರಕ್ಕೆ ಕರೆ ತಂದು ವೇಶ್ಯಾವಾಟಿಕೆಗೆ ಒತ್ತಾಯಿಸಿರುವುದಾಗಿ ವರದಿಯಾಗಿದೆ. 

ಆರ್ಕೆಸ್ಟ್ರಾ ಹೆಸರಿನಲ್ಲಿ ಯುವತಿಯರನ್ನು ಕರೆತಂದಿದ್ದ ಆರೋಪಿ ಪ್ರಜ್ವಲ್, ನಿತ್ಯ ಯುವತಿಯರಿಗೆಲ್ಲ ಕಿರುಕುಳ ನೀಡುತ್ತಿದ್ದ. ಜತೆಗೆ ಲಾಕ್ ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಳು. ಈ ವಿಷಯವನ್ನು ತಿಳಿದ ಯುವತಿ ಸ್ನೇಹಿತ, ತಕ್ಷಣ ತನಗೆ ಪರಿಚಯವಿದ್ದ ವಕೀಲರೊಬ್ಬರಿಗೆ ಮಾಹಿತಿ ನೀಡಿದ್ದನು. ತದ ನಂತರ ವಕೀಲರು, ಈ ವಿಷಯವನ್ನು ಟ್ವೀಟ್‌ ಮಾಡುವ ಮೂಲಕ ನಗರ ಪೊಲೀಸರ ಗಮನಕ್ಕೆ ತಂದಿದ್ದರು. ತಕ್ಷಣವೇ ಎಚ್ಚೇತುಕೊಂಡ ಪೊಲೀಸರು ದಾಳಿ ನಡೆಸಿ, ಒಟ್ಟು 12 ಯುವತಿಯರನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT