ರಾಜ್ಯ

ಕುಂದಾಪುರ: ನಾಗಮಂಗಲದ ಕೊರೋನಾ ಸೋಂಕಿತ ಸ್ನಾನ ಮಾಡಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್

Raghavendra Adiga

ಕುಂದಾಪುರ: ಸರಕು ವಾಹನದಲ್ಲಿ ಮುಂಬೈನಿಂದ ಬಂದಿದ್ದ ಮಂಡ್ಯ ಮೂಲದ ನಾಗಮಂಗಲದ ವ್ಯಕ್ತಿಯೊಬ್ಬನಿಗೆ ಕೊರೋನಾ ಇರುವುದು ದೃಢವಾಗಿದ್ದು . ಪ್ರಯಾಣದ ಸಮಯದಲ್ಲಿ, ಅವರು ತಾಲ್ಲೂಕಿನ ತೆಕ್ಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿದ್ದರು ಎಂಬ ಹಿನ್ನೆಲೆಯಲ್ಲಿ ಆ ಪೆಟ್ರೋಲ್ ಬಂಕ್ ಅನ್ನು ಸೀಲ್ ಮಾಡಲಾಗಿದೆ.  ಟೋಲ್ ಗೇಟ್ ಅನ್ನು ನಿರ್ವಹಿಸುತ್ತಿರುವ ಆರು ಸಿಬ್ಬಂದಿ ಮತ್ತು ಆರು ಉದ್ಯೋಗಿಗಳು  ಸೇರಿ  ಪೆಟ್ರೋಲ್ ಬಂಕ್ ಮಾಲೀಕರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಕೊರೋನಾ ಪೀಡಿತನು ಲಾಕ್ ಡೌನ್ ಅವಧಿಯಲ್ಲಿ ಅನುಮತಿ ಇಲ್ಲದೆ ಮುಂಬೈನಿಂದ ಖರ್ಜೂರಗಳನ್ನು ಸಾಗಿಸುತ್ತಿದ್ದ  ಟ್ರಕ್ ಮೂಲಕ ಪ್ರಯಾಣಿಸಿದ್ದ. ಮಂಡ್ಯದಲ್ಲಿ ಪ್ರಶ್ನಿಸುವಾಗ, ಶಿರೂರು ಹಾಗೂ ಸಾಸ್ತಾನ ಟೋಲ್ ಗೇಟ್ ಗಳ ನಡುವಿನ  ಹೆದ್ದಾರಿಯ ಎಡಭಾಗದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಸ್ನಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಮಾಹಿತಿಯನ್ನು ಸೋಮವಾರ ಸಂಜೆ ವೇಳೆಗೆ ಮಂಡ್ಯ ಜಿಲ್ಲಾಡಳಿ ದೃಢಪಡಿಸಿದ್ದು ಈ ಮಾಹಿತಿಯ ಆಧಾರದ ಮೇಲೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಾಗಭೂಷಣ್, ಮತ್ತು ಕೋಟ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಿತ್ಯಾನಂದ ಗೌಡ ಅವರು ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ ತೆಕ್ಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸೋಮವಾರ ತಡರಾತ್ರಿ ಮಂಡ್ಯ ವ್ಯಕ್ತಿ ಸ್ನಾನ ಮಾಡಿರುವುದು ಪತ್ತೆಯಾಗಿದೆ. ಟ್ರೋಲ್ ಬಂಕ್ ಅನ್ನು ತಕ್ಷಣವೇ ಮುಚ್ಚಲಾಗಿದ್ದು  ಪೆಟ್ರೋಲ್ ಬಂಕ್‌ನಿಂದ ಮೂರು ಕಿಲೋಮೀಟರ್ ಸುತ್ತಲಿನ ಪ್ರದೇಶಗಳನ್ನು ಸೀಲ್ ಮಾಡುವ ಸಾಧ್ಯತೆಗಳು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಹೇಳೀದೆ.

ಕಳೆದ 28 ದಿನಗಳಿಂದ ಯಾವುದೇ ಹೊಸ ಕೊರೋನಾ ಪ್ರಕರಣಗಳು ಕಂಡುಬರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಘೋಷಿಸಲಾಗಿತ್ತು.  ಆದರೆ ಈ ಬೆಳವಣಿಗೆ ಜಿಲ್ಲೆಯ ಜನರಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ

ಈ ವ್ಯಕ್ತಿ ಕ್ಯಾಂಟರ್ ಟ್ರಕ್ ಮೂಲಕ ಮುಂಬೈಯಿಂದ ನಾಗಮಂಗಲಕ್ಕೆ ಅಕ್ರಮವಾಗಿ ಪ್ರಯಾಣಿಸಿದ್ದ. ಹೋಟೆಲ್ ಕೆಲಸಗಾರರಾಗಿದ್ದ ಆತ ಏಪ್ರಿಲ್ 20 ರಂದು ಮುಂಬೈಯಿಂದ ಟ್ರಕ್ ಮೂಲಕ ಪ್ರಯಾಣಿಸಿ ಪ್ರಿಲ್ 22 ರಂದು ನಾಗಮಂಗಲವನ್ನು ತಲುಪಿದ್ದ,  ಏಪ್ರಿಲ್ 24 ರಂದು ಈತ ಕೋವಿಡ್  -19 ಪರೀಕ್ಷೆಗೆ ಒಲಗಾದಾಗ ಸೋಂಕಿರುವುದು ದೃಢವಾಗಿತ್ತು. ಲಾಕ್ ಡೌನ್ ನಿಯಮಗಳನ್ನು ಕಡೆಗಣಿಸಿ ಪ್ರಯಾಣಿಸಿದ್ದರಿಂದ ಜಿಲ್ಲಾಡಳಿತವು ಆತನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
 

SCROLL FOR NEXT