ರಾಜ್ಯ

ದಕ್ಷಿಣ ಕನ್ನಡದ ಮೂರು ಪ್ರದೇಶಗಳು ಕಂಟೈನ್ಮೆಂಟ್ ವಲಯದಿಂದ ಹೊರಕ್ಕೆ: ಜಿಲ್ಲಾಧಿಕಾರಿ ಘೋಷಣೆ

Raghavendra Adiga

ಮಂಗಳೂರು: ಕಳೆದ 28 ದಿನಗಳಿಂದ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯ ಎಂಬ ಘೋಷಣೆಯಿಂದ ಮುಕ್ತಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

 ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ಸಿಂಧೂ ಬಿ ರೂಪೇಶ್ ಏಪ್ರಿಲ್ 27 ಸೋಮವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಬಂಟ್ವಾಳದ ಸಜಿಪಮಡು, ಬೆಳ್ತಂಗಡಿಯ ಕರಯಾ ಗ್ರಾಮದ ಜನಪಥ್ ಕಾಲೋನಿ ಹಾಗೂ ಸುಳ್ಯದ ಅಜ್ಜಾವರ ಗ್ರಾಮಗಳನ್ನು ಕಂಟೈನ್ಮೆಂಟ್ ವಲಯದಿಂದ ಮುಕ್ತಗೊಳಿಸಿದ್ದಾರೆ.

ಕಳೆದ 28 ದಿನಗಳಿಂದ ಯಾವುದೇ ಹೊಸ ಕೊರೋನಾ ವೈರಸ್ ಪ್ರಕರಣಗಳು ಈ ಪ್ರದೇಶ ವ್ಯಾಪ್ತಿಯಲ್ಲಿ ಕಂಡುಬಂದಿಲ್ಲ ಅಲ್ಲದೆ ಇಲ್ಲಿನ ಎಲ್ಲಾ ಕೊರೋನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಇನ್ನು ದಕ್ಷಿಣ ಕನ್ನಡದಲ್ಲಿ ಪ್ರಸ್ತುತ ಎಂಟು ಕಂಟೈನ್ಮೆಂಟ್ ವಲಯಗಳಿದೆ ಎಂದು ಮಾಹಿತಿ ಇದೆ.

SCROLL FOR NEXT