ರಾಜ್ಯ

ಬೆಂಗಳೂರಲ್ಲೇ ನಡೆಯಲಿದೆ ಮುಂದಿನ ಏರ್'ಶೋ: ಫೆ.3ರಿಂದ ವೈಮಾನಿಕ ಪ್ರದರ್ಶನಕ್ಕೆ ನಿರ್ಧಾರ

Manjula VN

ಬೆಂಗಳೂರು: ಪ್ರತಿ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಳ್ಳುವ ಹಾಗೂ ದೇಶ-ವಿದೇಶಗಳ ಗಮನ ಸೆಳೆಯುವ ಏರೋ ಇಂಡಿಯಾ ಏರ್ ಶೋ ಅನ್ಯ ನಗರಗಳಿಗೆ ಸ್ಥಳಾಂತರವಾಗಬಹುದು ಎಂಬ ಆತಂಕ ದೂರವಾಗಿದೆ. 

2021ರಲ್ಲೂ ಏರೋ ಇಂಡಿಯಾವನ್ನು ಬೆಂಗಳೂರಿನಲ್ಲೇ  ಆಯೋಜಿಸಲು ರಕ್ಷಣಾ ಇಲಾಖೆ ನಿರ್ಧರಿಸಿ ದಿನಾಂಕವನ್ನೂ ಪ್ರಕಟಿಸಿದೆ. 

ಫೆ.3ರಿಂದ 7ರವರೆಗೆ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ರಕ್ಷಣಾ ಉತ್ಪಾದನಾ ಇಲಾಖೆ ಬುಧವಾರ ಏರೋ ಇಂಡಿಯಾ ವೆಬ್"ಸೈಟ್ ನಲ್ಲಿ ಒಂದು ಸಾಲಿನ ಪ್ರಕಟಣೆ ಹೊರಡಿಸಿದೆ. 

ಕಳೆದ ವರ್ಷ ಲಖನೌಗೆ ಏರ್ ಸೋ ಸ್ಥಳಾಂತರಿಸುವ ಯತ್ನ ನಡೆದಿತ್ತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಅದನ್ನು ಕೈಬಿಡಲಾಗಿತ್ತು. ಈ ನಡುವೆ ಏರ್ ಸೋ ದಿನಾಂಕ ಪ್ರಕಟವಾಗಿದ್ದರೂ, ಅಂತಿಮ ತೀರ್ಮಾನದ ಮೇಲೆ ಕೊರೋನ ಪರಿಸ್ಥಿತಿ ಬೀರುವ ಸಾಧ್ಯತೆಯಿದೆ. ಕೊರೋನಾ ಕಾರಣದಿಂದ ಒಲಿಂಪಿಕ್ಸ್, ವಿಶ್ವಕಪ್ ಪಂದ್ಯಗಳನ್ನೇ ಮುಂದೂಡಲಾಗಿದೆ. ಹೀಗಾಗಿ ಕೊರೋನಾ ಪರಿಸ್ಥಿತಿ ನೋಡಿಕೊಂಡು  ಈ ವರ್ಷದ 2ನೇ ಭಾಗದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT