ರಾಜ್ಯ

ವಿಸಾ ನಿಯಮ ಉಲ್ಲಂಘನೆ: ಸಿಸಿಬಿ ಪೊಲೀಸರಿಂದ 20 ವಿದೇಶಿ ಪ್ರಜೆಗಳ ಬಂಧನ

Manjula VN

ಬೆಂಗಳೂರು: ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ತಂಗಿದ್ದ 20 ಆಫ್ರಿಕನ್ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಕಲಿ ಕರೆನ್ಸಿ, ಮಾದಕವಸ್ತು ಮಾರಾಟ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 3 ಆಫ್ರಿಕಾ ಪ್ರಜೆಗಳು ಬಂಧಿತರಲ್ಲಿ ಸೇರಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಹೆಣ್ಣೂರು, ಬಾಗಲೂರು, ಕೊತ್ತನೂರು, ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಳಿದುಕೊಂಡಿರುವ ಆಫ್ರಿಕಾ ಪ್ರಜೆಗಳು ಗಲಾಟೆ ಮತ್ತು ತೊಂದರೆ ಕೊಡುತ್ತಿರುವುದರ ಕುರಿತ ದೂರುಗಳ ಹಿನ್ನೆಲೆಯಲ್ಲಿ ನಗರ ಪೊಲೀಸ್ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಸಿಸಿಬಿ ತಂಡ 34 ತಾಸಿನ ಕಾರ್ಯಾಚರಣೆಯಲ್ಲಿ 80 ಆಫ್ರಿಕಾ ಪ್ರಜೆಗಳನ್ನು ವಶಕ್ಕೆ ಪಡೆದಿದೆ.

ಬಂಧಿತರಲ್ಲಿ ಕೆಲವರು ವೀಸಾ ಅವಧಿ ಮುಗಿದ ನಂತರವೂ ನಗರದಲ್ಲಿ ಉಳಿದುಕೊಂಡಿದ್ದು, ಇವರಲ್ಲಿ ಕೆಲವರು ಪಾಸ್‌ಪೋರ್ಟ್ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಕಾಯ್ದೆಗಳಡಿ ಪೊಲೀಸರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

SCROLL FOR NEXT