ರಾಜ್ಯ

ಅಯೋಧ್ಯೆ ಭೂಮಿಪೂಜೆ: ಪ್ರಧಾನಿ ಮೋದಿಗೆ ಕನ್ನಡಿಗ ರಾಮಮೂರ್ತಿ ಕೈಯಲ್ಲಿ ಅರಳಿದ ಕೋದಂಡರಾಮನ ಮೂರ್ತಿ ಉಡುಗೊರೆ!

Manjula VN

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕರ್ನಾಟಕದ ಶಿಲ್ಪಿ ರಾಮಮೂರ್ತಿ ಆಚಾರ್ ಅವರು ಕೆತ್ತಿದ ಕೋದಂಡ ರಾಮನ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. 

ರಾಮಮೂರ್ತಿಯನರು ಬೆಂಗಳೂರಿನ ಕೆಂಗೇರಿ ನಿವಾಸಿಯಾಗಿದ್ದು, ತಾವು ಕೆತ್ತಿದ ಕೋದಂಡರಾಮನ ಮೂರ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

ಮೂರ್ತಿ ಕೆತ್ತನೆ ಮಾಡಲು ತೇಗದ ಮರವನ್ನು ಆಯ್ಕೆ ಮಾಡಿದ್ದರು. ಚೆನ್ನಪಟ್ಟಣದಲ್ಲಿರುವ ವರ್ಕ್ ಶಾಪ್ ನಲ್ಲಿಯೇ ತಿಂಗಳುಗಳಿಂದ ಕೆಲಸ ಮಾಡಿದ್ದರು. ಇದರಂತೆ ಮೂರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದರು. 1.5 ಅಡಿ ಎತ್ತರದ ಕೋದಂಡ ರಾಮ, 3 ಅಡಿಗಳಿರುವ ಮತ್ತೊಂದು ಕೋದಂಡ ರಾಮ ಹಾಗೂ ಲವ ಮತ್ತು ಕುಶನ ಮೂರ್ತಿನಗಳನ್ನು ಕೆತ್ತಿದ್ದರು ಎಂದು ರಾಮಮೂರ್ತಿಯವರ ಕುಟುಂಬಸ್ಥರು ಹೇಳಿದ್ದಾರೆ. 

ಆಲೋಚನೆಯ ಕಣ್ಣುಗಳಿಂದ ನಾನು ಮೂರ್ತಿಯನ್ನು ಕೆತ್ತಿದ್ದೆ. 35-40 ವರ್ಷದ ರಾಮನನ್ನು ನೆನೆಸಿಕೊಳ್ಳುತ್ತೇನೆ. ಚೋಳರ ಶೈಲಿಯಲ್ಲಿ ಬಿಡಿಸಲಾಗುವ ಶಿಲ್ಪಿಗಳು ಬಹಳ ಇಷ್ಟವಾಗುತ್ತವೆ. ಪ್ರತೀ ಶೈಲಿಯಲ್ಲಿಯೂ ಕೆಲ ವೈಶಿಷ್ಟ್ಯತೆಗಳನ್ನು ಸಂಯೋಜಿಸಿರುತ್ತೇನೆ. ಅಯೋಧ್ಯೆ ಸಂಶೋಧನಾ ಕೇಂದ್ರದ ನಿರ್ದೇಶಕರು, ಸಾಂಸ್ಕೃತಿಕ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸರ್ಕಾರ ನನಗೆ ದೂರುವಾಣಿ ಕರೆ ಮಾಡಿ, ಮೂರ್ತಿಗಳನ್ನು ಸಿದ್ಧಪಡಿಸುವಂತೆ ತಿಳಿಸಿತ್ತು. ಇದಕ್ಕೂ ಮೊದಲೇ ನಾನು 7.5 ಅಡಿ ಎತ್ತರದ ಶ್ರೀ ಕೋದಂಡ ರಾಮ ಮೂರ್ತಿಯನ್ನು ಕೆತ್ತನೆ ಮಾಡಿದ್ದೆ. ಅದನ್ನು ಅಯೋಧ್ಯೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅದೇ ಮಾದರಿಯ 3 ಅಡಿಯಮೂರ್ತಿ ಬೇಕೆಂದಿದ್ದರು. ಮೋದಿಗೆ ನೀಡುವ ಬಗ್ಗೆ ತಿಳಿಸಿರಲಿಲ್ಲ. ಆದರೆ, 10 ದಿನಗಳ ಹಿಂದೆ ಮೋದಿಗೆ ಉಡುಗೊರೆಯಾಗಿ ನಿಮ್ಮ ಮೂರ್ತಿಯನ್ನು ನೀಡಲಾಗುತ್ತಿದೆ. ಬಹುಬೇಕ ನೀಡಬೇಕು ಎಂದಿದ್ದರು. ಆಗ ನನಗೆ ಬಹಳ ಸಂತೋಷವಾಯಿತು ಎಂದು ರಾಮಮೂರ್ತಿಯವರು ಭಾವುರಾದರು. 

ವಾರಗಳ ಹಿಂದಷ್ಟೇ ರಾಮಮೂರ್ತಿಯವರು ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಮೋದಿಯವರಿಗೆ ತಾವು ಕೆತ್ತಿದ ರಾಮನ ಮೂರ್ತಿಯನ್ನು ನೀಡುವುದಕ್ಕೆ ಬಹಳ ಸಂತೋಷವಾಯಿತು ಎಂದು ತಿಳಿಸಿದ್ದಾರೆ. 

SCROLL FOR NEXT