ರಾಜ್ಯ

ನಿಧಿ ಶೋಧನೆ : ಓರ್ವ ಸಾವು‌ ಮೂವರಿಗೆ ಗಾಯ

Raghavendra Adiga

ಬೆಂಗಳೂರು: ನಿಧಿ ಶೋಧಿಸುತ್ತಿದ್ದಾಗ ಪಾಳು ಮಂಟಪ ಕುಸಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನಂದಗುಡಿಯ ಹಿಂಡಿಗನಾಳದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಘಟನೆಯಲ್ಲಿ ಹಿಂಡಿಗಾನಹಳದ ಸುರೇಶ್ (23) ಮೃತಪಟ್ಟ ಯುವಕ. ಕೆಂಬಡಿಗಾನಹಳ್ಳಿಯ ಶ್ರೀನಿವಾಸ (22) ಮತ್ತು ಮಂಜುನಾಥ್ (23) ಹಾಗೂ ಯಲಹಂಕದ ಸಬಾಸಿನ್ (22) ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರಿಗೆ ಕಾಲು ಮುರಿದಿದ್ದು, ಶಸ್ತ್ರಚಿಕಿತ್ಸೆ ಒಳಗಾಗಿದ್ದು, ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಿಂಡಿಗನಾಳದ ಹೆದ್ದಾರಿಯ ಬಳಿಯ ಒಂದು ಸಾವಿರ ವರ್ಷಗಳ ಪುರಾತನ ಆಂಜನೇಯ ಸ್ವಾಮಿ ದೇವಾಲಯದ‌ ಕಲ್ಲು ಮಂಟಪದ ಬಳಿ‌ ಮಧ್ಯರಾತ್ರಿ 12ರ ವೇಳೆ‌‌ 9 ಮಂದಿಯ ತಂಡದಿಂದ ನಿಧಿ ಆಸೆಯಿಂದ ಆಳದ ಗುಂಡಿ‌ ತೆಗೆಯುವ ಸಂದರ್ಭದಲ್ಲಿ ಮಂಟಪ ಕುಸಿದು ಬಿದ್ದಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರೆ.

ದುಷ್ಕರ್ಮಿಗಳೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಮಾಹಿತಿ ರವಾನಿಸಿ ಪರಾರಿಯಾಗಿದ್ದಾರೆ‌ ಎನ್ನಲಾಗಿದೆ. 

ಭಯಭೀತಗೊಂಡ ಸ್ಥಳೀಯರೇ ನಂದಗುಡಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಮಂಟಪದ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

SCROLL FOR NEXT