ರಾಜ್ಯ

ಮಂಗಳೂರು: ಕಾಲ್ಬೆರಳಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಶೇ.85 ರಷ್ಟು ಅಂಕ!

Raghavendra Adiga

ಮಂಗಳೂರು: ಕೈಗಳು ನಿಷ್ಕ್ರಿಯವಾಗಿದ್ದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಾಲಿನ ಬೆರಳುಗಳಿಂದ ಬರೆದ ವಿಶೇಷಚೇತನ ವಿದ್ಯಾರ್ಥಿಯೊಬ್ಬ  ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಲ್ಲರಿಗೆ ಮಾದರಿಯಾಗಿದ್ದಾರೆ.

ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸೋಮವಾರ ಹೊರಬಿದ್ದಿದ್ದು . ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೌಶಿಕ್ ಆಚಾರ್ಯ 500 ಅಂಕಗಳಲ್ಲಿ 424 ಅಂಕಗಳನ್ನು ಗಳಿಸಿದ್ದಾರೆ.

ಕೈಗಳು ನಿಷ್ಕ್ರಿಯವಾಗಿರುವ ದ್ಯಾರ್ಥಿಯು ಮೊದಲ ತರಗತಿಯಿಂದಲೂ ಕಾಲಿನ ಬೆರಳು ಬಳಸಿಯೇ ಬರೆಯುವುದನ್ನು ಅಭ್ಯಾಸ ಮಾಡಿದ್ದ. ಕೌಶಿಕ್ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದವರಾಗಿದ್ದಾರೆ. 

ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆಗೆ ಹಾಜರಾದ ನಂತರ ಜುಲೈ 10 ರಂದು ವಿದ್ಯಾರ್ಥಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಅಭಿನಂದಿಸಿದ್ದರು..ಬಾಲಕನ ಪ್ರಯತ್ನವನ್ನು ಸಚಿವರು ಶ್ಲಾಘಿಸಿದ್ದು ವಿದ್ಯಾರ್ಥಿ ಎಲ್ಲರಿಗೆ ಆದರ್ಶಪ್ರಾಯ ಎಂದು ಸಚಿವರು ಹೇಳಿದ್ದರು.

ಸಚಿವರು ವಿದ್ಯಾರ್ಥಿಯು ತಮ್ಮ ಪಿಯು ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.

SCROLL FOR NEXT