ರಾಜ್ಯ

ಬೆಂಗಳೂರು ಗಲಭೆ: ಆಗಸ್ಟ್ 11ರ ಕರಾಳ ರಾತ್ರಿ ನೆನೆದು ಈಗಲೂ ಬೆಚ್ಚಿ ಬೀಳುತ್ತಿರುವ ಸ್ಥಳೀಯರು!

Manjula VN

ಬೆಂಗಳೂರು: ಗಲಭೆ ನಡೆದು ಎರಡು ದಿನ ಕಳೆದಿದ್ದರೂ, ಸ್ಥಳದಲ್ಲಿ ಶಾಂತಿ ನೆಲೆಯೂರಿದ್ದರೂ ಕೂಡ ಈಗಲೂ ಕಾವಲ್ ಬೈರಸಂದ್ರದ ನಿವಾಸಿಗಳು ಈಗಲೂ ಆ.11ರ ಕರಾಳ ರಾತ್ರಿ ನೆನೆದು ಈಗಲೂ ಬೆಚ್ಚಿ ಬೀಳುತ್ತಿದ್ದಾರೆ. 

ಮಂಗಳವಾರ ನಡೆದ ಗಲಭೆ ಜೀವನದಲ್ಲೇ ಮರೆಯದಂತಹ ಕರಾಳ ರಾತ್ರಿ. ಹಿಂಸಾಚಾರಕ್ಕೆ ಬೆದರಿರುವ ಜನರು ನಗರದಲ್ಲಿರುವ ತಮ್ಮ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಇಂತಹ ಹಿಂಸಾಚಾರ ನಡೆಯುತ್ತದೆ ಎಂದಿಗೂ ತಿಳಿದಿರಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. 

ಇದ್ದಕ್ಕಿದ್ದಂತೆ ಸ್ಥಳಕ್ಕೆ ಸೇರಿದ ಸಾವಿರಾರು ಜನರು ಏಕಾಏಕಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಚ್ಚಿದರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ನವೀನ್ ಬಂಧಿಸುವಂತೆ ಆಗ್ರಹಿಸುತ್ತಿದ್ದರು. 3 ಗಂಟೆಗಳಲ್ಲಿ 60 ಪೊಲೀಸರು ಗಾಯಗೊಂಡಿದ್ದರು. ಗೋಲಿಬಾರ್ ನಿಂದ ಮೂವರು ಸಾವನ್ನಪ್ಪಿದ್ದರು. ಹಲವು ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದರು. 

ಸಂಪೂರ್ಣ ಹಿಂಸಾಚಾರ ಘಟನೆಯನ್ನು ನೆನೆದರೆ ಈಗಲೂ ಭಯವಾಗುತ್ತದೆ. ಈಗಲೂ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಗಳಿದ್ದು, ವಿಐಪಿಗಳು ಓಡಾಟ ನಡೆಸುತ್ತಲೇ ಇದ್ದಾರೆ. ಔಷಧಿ ಅಂಗಡಿಗಳು ಬಿಟ್ಟರೆ ಬೇರಾವುದೇ ಅಂಗಡಿಗಳೂ ತೆರೆಯುತ್ತಿಲ್ಲ. ಭದ್ರತಾ ಸಿಬ್ಬಂದಿಗಳು ಮಾತ್ರ ಓಡಾಡುತ್ತಿದ್ದಾರೆ. ಯಾರೊಬ್ಬರೂ ಮನೆಯಿಂದ ಹೊರಗೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. 

ದುಷ್ಕರ್ಮಿಗಳು ಮನೆಗೆ ನುಗ್ಗಿತ್ತಿರುವುದನ್ನು ನಾನು ಟಿವಿಯಲ್ಲಿ ನೋಡಿದ್ದೆ. ಮುಸ್ಲಿಮರೇ ದಾಳಿ ನಡೆಸಿದರು, ಮುಸ್ಲಿಮರೇ ನಮ್ಮ ಜೀವ ಉಳಿಸಿದರು ಎಂದು ನವೀನ್ ಅವರ ತಾಯಿ ಜಯಂತಿಯವರು ಹೇಳಿದ್ದಾರೆ. 

SCROLL FOR NEXT