ರಾಜ್ಯ

ಜಿಗಣಿಯಲ್ಲಿ ವಾಹನಕ್ಕೆ ಚಿರತೆ ಡಿಕ್ಕಿ: ಸ್ಥಳದಲ್ಲೇ ನಾಲ್ಕು ತಿಂಗಳ ಮರಿಚಿರತೆ ಸಾವು

Shilpa D

ಬೆಂಗಳೂರು: ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಳಿವೆ, ಆದರೆ ಈ ಪ್ರದೇಶದಲ್ಲಿ ಚಿರತೆಗಳಿಗೆ ರಕ್ಷಣೆಯಿಲ್ಲ, ಈ ಪ್ರದೇಶ ಸುರಕ್ಷಿತವಾಗಿಯೂ ಇಲ್ಲ.

ಅದರಲ್ಲೂ ವಿಶೇಷವಾಗಿ ಹೆದ್ದಾರಿಗಳಲ್ಲಿ ರಸ್ತೆ ದಾಟುವ ಚಿರತೆಗಳಿಗೆ ಸುರಕ್ಷತೆಯಿಲ್ಲ, ಗುರುವಾರ ಬೆಳಗ್ಗೆ ಜಿಗಣಿ-ಉರಗನದೊಡ್ಡಿ ರಸ್ತೆಯಲ್ಲಿ ಗಂಡು ಚಿರತೆ ಶವವಾಗಿ ಸಿಕ್ಕಿದೆ.

ಬುಧವಾರ ರಾತ್ರಿ ರಸ್ತೆ ದಾಟುವಾಗ ವೇಗವಾಗಿ ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದೆ. ಆಗಸ್ಟ್ 10 ರಂದು ತುಮಕೂರು-ಬೆಂಗಳೂರು ಹೆದ್ದಾರಿಯ ಕ್ಯಾತಸಂದ್ರದಲ್ಲಿ ಮತ್ತೊಂದು ಚಿರತೆ ವಾಹನಕ್ಕೆ ಬಲಿಯಾಗಿತ್ತು. ಮೂರರಿಂದ ನಾಲ್ಕು ತಿಂಗಳ ಮರಿ ಚಿರತೆ ಬಲಿಯಾಗಿದೆ.

ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ವಾಸ್ತವವಾಗಿ, ಮೂರು ಮರಿಗಳನ್ನು ಹೊಂದಿರುವ ತಾಯಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು, ಹಾಗೂ ಸತ್ತ ಮರಿಯೂ ಅದೇ ಚಿರತೆ ಮರಿಯಾಗಿರಬಹುದು ಎಂದು ಆನೆಕಲ್ ಆರ್ ಎಫ್ ಓ ಕೃಷ್ಣ ತಿಳಿಸಿದ್ದಾರೆ.

ಹೊಸ ಕ್ಯಾಂಪಸ್ ಗಾಗಿ ಪ್ರಧಾನ ನಿರ್ವಹಣಾ ಸಂಸ್ಥೆಯ ನಿರ್ಮಾಣ ಚಟುವಟಿಕೆಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಜೊತೆಗೆ ವನ್ಯ ಜೀವಿಗಳ ಸಂಚಾರ ಕೂಡ ಹೆಚ್ಚಿದೆ, ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯ ಆನೆಗಳು ಮತ್ತು ರಸ್ತೆಗೆ ಬರುತ್ತವೆ ಎಂದು ತಿಳಿಸಿದ್ದಾರೆ.
 

SCROLL FOR NEXT