ರಾಜ್ಯ

ರಾಜ್ಯದ 19 ಪೊಲೀಸ್​ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪೊಲೀಸರ ಗಣನೀಯ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 19 ಪೊಲೀಸ್​ಅಧಿಕಾರಿಗಳು, ಸಿಬ್ಬಂದಿ ಭಾಜನರಾಗಿದ್ದಾರೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪೊಲೀಸರ ಗಣನೀಯ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 19 ಪೊಲೀಸ್​ಅಧಿಕಾರಿಗಳು, ಸಿಬ್ಬಂದಿ ಭಾಜನರಾಗಿದ್ದಾರೆ.

ರಾಷ್ಟ್ರ ಪದಕಕ್ಕೆ ಆಯ್ಕೆಯಾದವರನ್ನು ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿದೆ‌.

ಲೋಕಾಯುಕ್ತ ಸಂಸ್ಥೆ ಅಕ್ರಮ ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ ತಂಡದಲ್ಲಿ ಸೇವೆ ಸಲ್ಲಿಸಿದ ಸಿಐಡಿ ಸಹಾಯಕ ಸಬ್​ಇನ್​ಸ್ಪೆಕ್ಟರ್​ ವಿ.ಎಲ್​.ಎನ್​. ಪ್ರಸನ್ನಕುಮಾರ್​ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ. ಶ್ಲಾಘನೀಯ ಸೇವಾ ಪದಕಕ್ಕೆ 18 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದು, ರಾಜ್ಯದ ಒಟ್ಟು 19 ಪೊಲೀಸರಿಗೆ ಈ ಬಾರಿ ಪ್ರಶಸ್ತಿ ದೊರಕಿದೆ.

ಪದಕ ವಿಜೇತ ಪೋಲೀಸ್ ಅಧಿಕಾರಿಗಳ ಪಟ್ಟಿ ಹೀಗಿದೆ-

ಕೆ. ಹೊನ್ನಪ್ಪ, ಸಿಹೆಚ್​ಸಿ ಡಿಪಿಒ, ಬೆಂಗಳೂರು
ರಾಮಾಂಜನೇಯ, ಎಎಸ್​ಐ ಕೆಬಿ ಕ್ರಾಸ್ ಠಾಣೆ ತುಮಕೂರು
ಹೆಚ್. ನಂಜುಂಡಯ್ಯ, ಎಎಸ್​ಐ ಡಿಸಿಆರ್​ಬಿ, ಚಿಕ್ಕಬಳ್ಳಾಪುರ ಜಿಲ್ಲೆ
ಎಂ. ಹೆಚ್ ಚಂಡೇಕರ್, SPL RSI 3rd BTN KSRP, ಬೆಂಗಳೂರು
ಜಿ. ಎನ್ ರುದ್ರೇಶ್ ,SPL RPI 3rd BTN ksrp, ಬೆಂಗಳೂರು
ಪಿ. ಉಮೇಶ್, ಡಿವೈಎಸ್​ಪಿ ಪೊಲೀಸ್​ ಟ್ರೈನಿಂಗ್​ ಸ್ಕೂಲ್,​ ಮೈಸೂರು
ಹೆಚ್. ಎಂ ಸತೀಶ್, ಎಸಿಪಿ, ನಾರ್ತ್​ ಟ್ರಾಫಿಕ್,​ ಬೆಂಗಳೂರು
ಹೆಚ್. ಎಂ. ಶೈಲೇಂದ್ರ, ಸೋಮವಾರಪೇಟೆ, ಸಬ್​ ಡಿವಿಎಸ್,​​ ಕೊಡಗು
ಪರಮೇಶ್ವರ್ ಹೆಗ್ಡೆ, , ಡಿವೈಎಸ್​ಪಿ ಸಿಐಡಿ ಬೆಂಗಳೂರು
ವಿ.ಎಲ್​.ಎನ್ ಪ್ರಸನ್ನ ಕುಮಾರ್, ಎಎಸ್​ಐ ಸಿಐಡಿ, ಬೆಂಗಳೂರು
ಹೇಮಂತ್ ಕುಮಾರ್, ಡಿವೈಎಸ್​ಪಿ ಎಸ್​ಐಟಿ ಬೆಂಗಳೂರು
ಮಂಜುನಾಥ್, ಡಿವೈಎಸ್​ಪಿ ಎಸಿಬಿ, ಮಂಡ್ಯ
ಅರುಣ್ ನಾಗೇಗೌಡ, ಡಿವೈಎಸ್​ಪಿ, ಶ್ರೀರಂಗಪಟ್ಟಣ ಸಬ್​ ಡಿವಿಎಸ್,​ ಮಂಡ್ಯ
ಹೆಚ್.ಬಿ ರಮೇಶ್ ಕುಮಾರ್, ಡಿವೈಎಸ್​ಪಿ, ಬೆಂಗಳೂರು.
ಸಿ.ಎನ್ ದಿವಾಕರ್, ಸಿಪಿಐ ಕೊಡಗು ಪೊಲೀಸ್ ಠಾಣೆ
ಬಿ.ಎ ಲಕ್ಷ್ಮಿ ನಾರಾಯಣ್, ಪಿಎಸ್​ಐ ಸಿಸಿಬಿ, ಬೆಂಗಳೂರು
ಕೆ. ಜಯಪ್ರಕಾಶ್, ಪಿಎಸ್​ಐ ವೈರ್​ಲೆಸ್,​ ಮಂಗಳೂರು
ಅತೀಕ್ ಯು.ಆರ್ ರೆಹಮಾನ್, ಎಎಸ್​ಐ, ಆಗುಂಬೆ
ಆರ್. ಎನ್ ಬಾಳೀಕಾಯ್, ಎಎಸ್​ಐ, ರಾಣಿ ಬೆನ್ನೂರ್ ಪೊಲೀಸ್ ಠಾಣೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT