ರಾಜ್ಯ

ಯಾವುದೇ ಕ್ಷಣಕ್ಕೆ ಸಾವಿರಾರು ಕ್ಯೂಸೆಕ್ ನೀರು: ತುಂಗಭದ್ರಾ ಪಾತ್ರದಲ್ಲಿ ಹೈ ಅಲರ್ಟ್ 

Nagaraja AB

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು ನದಿ ಪಾತ್ರದಲ್ಲಿನ ಗ್ರಾಮಗಳ ಜನರಲ್ಲಿ ಇದೀಗ ಹೈ ಅಲರ್ಟ್ ಇರುವಂತೆ ವಿಪತ್ತು ನಿರ್ವಹಣಾ ತಂಡ ಜಾಗೃತಿ ಮೂಡಿಸುತ್ತಿದೆ.

ಜಲಾಶಯದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಅಪಾರ ಪ್ರಮಾಣದ  ಮಳೆಯಿಂದಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಳ ಹರಿವು ಹೆಚ್ಚಾದಂತೆ ಸಹಜವಾಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ 
ನೀರನ್ನು ವಾಡಿಕೆಯಂತೆ ನದಿಗೆ ಹರಿಸಲಾಗುತ್ತದೆ.

ಈ ಹಿನ್ನೆಲೆ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ, ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸುವ ಉದ್ದೇಶಕ್ಕೆ ನದಿ ಸಮೀಪಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ನದ ಸಮೀಪದ ಹೊಲ-ಗದ್ದೆ, ತೋಟಗಳಿಗೆ ಹೋಗದಂತೆ ರೈತರಿಗೆ ಜಾಗೃತಿ ಮೂಡಿಸಲಾಗುತಿದೆ.

ಈಗಾಗಲೆ ಕಡೇಬಾಗಿಲು, ಸಣಾಪುರ, ಬಸವನದುರ್ಗ, ರಾಂದುರ್ಗ (ಗೂಗಿಬಂಡೆ ಕ್ಯಾಂಪ್), ಸಿಂಗನಗುಂಡ, ಆನೆಗೊಂದಿ, ಹಿರೇಜಂತಕಲ್, ದೇವಘಾಟ, ಚಿಕ್ಕಜಂತಕಲ್, ಹೆಬ್ಬಾಳ, ಮುಸ್ಟೂರು, ಉಳೇನೂರು, ಬೆನ್ನೂರು, ಕುಂಟೋಜಿ, ಲಕ್ಷ್ಮಿಕ್ಯಾಂಪ್ ಮೊದಲಾದ ಗ್ರಾಮಗಳಲ್ಲಿ ಹೈ ಅಲರ್ಟ್ ಮೂಡಿಸಲಾಗಿದೆ.  
ವರದಿ: ಶ್ರೀನಿವಾಸ್ .ಎಂ.ಜೆ

SCROLL FOR NEXT