ರಾಜ್ಯ

ಪ್ಲಾಸ್ಮಾ ಥೆರಪಿಗಾಗಿ ಡಿಸಿಜಿಐ ಅನುಮತಿ ಕೇಳಿದ ಮಣಿಪಾಲ ಕೆಎಂಸಿ  ಆಸ್ಪತ್ರೆ

Raghavendra Adiga

ಮಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೋವಿಡ್ -19 ರೋಗಿಗಳ ಚೇತರಿಕೆಗಾಗಿ  ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾರಂಭಿಸಲು ಉಡುಪಿ ಜಿಲ್ಲೆ ಮಣಿಪಾಲದ ಕೆಎಂಸಿ ಆಸ್ಪತ್ರೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಅನುಮತಿ ಕೋರಿದೆ.

ಒಮ್ಮೆ ಡಿಸಿಜಿಐ ಅನುಮತಿ ಸಿಕ್ಕಿದ ನಂತರ ರೋಗಿಗಳಿಗೆ  ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾರಂಭಿಸಲಾಗುತ್ತದೆ.

ಕನ್ವೆಲೆಸೆಂಟ್ ಪ್ಲಾಸ್ಮಾ ಚಿಕಿತ್ಸೆಯು ರಕ್ತದಾನಿಗಳಿಂದ ಪ್ಲಾಸ್ಮಾ ಅಥವಾ ರಕ್ತದ ದ್ರವ ಭಾಗವನ್ನು ಸಂಗ್ರಹಿಸುವುದನ್ನು ಒಳಗೊಂಡಿರುತ್ತದೆ. 

ಸೋಂಕಿನಿಂದ ಬದುಕುಳಿದ ರೋಗಿಗಳಿಂದ ಪ್ಲಾಸ್ಮಾ ಪಡೆಯುವುದರಿಂದ ಕೋವಿಡ್ -19 ಪ್ರತಿಕಾಯಗಳನ್ನು ಹೊರತೆಗೆದು ಸೋಂಕಿಗೆ ಒಳಗಾದವರಿಗೆ ಒದಗಿಸುವುದು ಈ ಚಿಕಿತ್ಸೆಯ ಹಿಂದಿನ ಉದ್ದೇಶವಾಗಿದೆ. ಸೋಂಕಿತ ರೋಗಿಗಳಿಗೆ ತಮ್ಮ ದೇಹದಲ್ಲಿ ಪ್ರತಿಕಾಯವನ್ನು ಉತ್ಪಾದಿಸಲು ಇದು ಸಹಾಯ ಮಾಡುತ್ತದೆ ಎಂದು ಉಡುಪಿಯ ಡಾ ಟಿ ಎಂ ಪೈ ಆಸ್ಪತ್ರೆಯ ಡಾ.ಶಶಿಕಿರಣ್ ಉಮಕಾಂತ್ ಹೇಳಿದರು

SCROLL FOR NEXT