ರಾಜ್ಯ

ಕರ್ನಾಟಕದಲ್ಲಿ ಇಂದು 7,571 ಕೊರೋನಾ ಪ್ರಕರಣ ಪತ್ತೆ, ಬೆಂಗಳೂರಿನಲ್ಲಿ 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!

Vishwanath S

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 7,571 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಕಳೆದ 24 ಗಂಟೆಯಲ್ಲಿ ದಾಖಲೆಯ 93 ಮಂದಿ ಬಲಿಯಾಗಿದ್ದಾರೆ. 

ಕಳೆದ 24 ಗಂಟೆಯಲ್ಲಿ 7,571 ಹೊಸ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,64,546ಕ್ಕೆ ಏರಿಕೆಯಾಗಿದೆ. 

ಕೋವಿಡ್-19 ಸೋಂಕಿನಿಂದ ಇಂದು ದಾಖಲೆಯ 93 ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಮೃತರ ಸಂಖ್ಯೆ 4,522ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಇಂದು 6,561 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 2,64,546 ಪ್ರಕರಣಗಳ ಪೈಕಿ 1,76,942 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನು 83,066 ಸಕ್ರಿಯ ಪ್ರಕರಣಗಳಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೆಂಗಳೂರಿನಲ್ಲಿಂದು 2,948 ಪ್ರಕರಣ ಪತ್ತೆಯಾಗಿದ್ದು 22 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 1,635ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 2,580 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 1,02,770 ಮಂದಿ ಸೋಂಕಿಗೆ ತುತ್ತಾಗಿದ್ದು 66,602 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 33,280 ಸಕ್ರೀಯ ಪ್ರಕರಣಗಳಿವೆ.

ಇನ್ನುಳಿದಂತೆ ಬಳ್ಳಾರಿ 540, ಬೆಳಗಾವಿ 384, ದಾವಣಗೆರೆ 237, ಶಿವಮೊಗ್ಗ 227, ಉಡುಪಿ 278, ದಕ್ಷಿಣ ಕನ್ನಡ 202,  ಬಾಗಲಕೋಟೆ 115, ತುಮಕೂರು 136, ಚಿಕ್ಕಮಗಳೂರು 102, ಚಿತ್ರದುರ್ಗ 98, ಉತ್ತರ ಕನ್ನಡ 91, ಬೆಂಗಳೂರು ಗ್ರಾಮಾಂತರ 79, ಬೀದರ್ 73, ಚಾಮರಾಜನಗರ 59, ಚಿಕ್ಕಬಳ್ಳಾಪುರ 61, ಕೋಲಾರದಲ್ಲಿ 50 ಪ್ರಕರಣ ಪತ್ತೆಯಾಗಿದೆ.

SCROLL FOR NEXT