ರಾಜ್ಯ

ಕೊರೋನಾ ವೈರಸ್: ಇಬ್ಬರು ಮಕ್ಕಳ ಬಲಿ, ರಾಜ್ಯದಲ್ಲಿ ಮತ್ತೆ ಶತಕ ದಾಟಿದ ಸೋಂಕಿತರ ಸಾವು

Srinivasamurthy VN

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಕೊರೋನಾ ವೈರಸ್ ಹಾವಳಿ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಇಬ್ಬರು ಮಕ್ಕಳ ಸೇರಿದಂತೆ 102 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಆರೋಗ್ಯ ಇಲಾಖೆ ಬಿಡೆಗಡೆ ಮಾಡಿದ್ದ ಹೆಲ್ಲ್ ಬುಲೆಟಿನ್ ನಲ್ಲಿ SARI (Severe Acute Respiratory Infection) ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ 10 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಬಾಲಕಿ ಕಳೆದ ಆಗಸ್ಟ್ 2ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಂತೆಯೇ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.5 ತಿಂಗಳ ಮಗುವೊಂದು ಆಗಸ್ಟ್ 15ರಂದು ಆಸ್ಪತ್ರೆಗೆ ದಾಖಲಾಗಿತ್ತು. ಆದರೆ 3 ದಿನಗಳ ಬಳಿಕ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇದಲ್ಲದೆ ರಾಜ್ಯದಲ್ಲಿ 99 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ 4,429 ಮಂದಿ ಸೋಂಕಿತರು  ಬಲಿಯಾಗಿದ್ದಾರೆ.

ಇನ್ನು ನಿನ್ನೆ ಒಟ್ಟಾರೆ 7,385 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2,912 ಬೆಂಗಳೂರುನಲ್ಲೇ ದಾಖಲಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,56,975ಕ್ಕೆ ಏರಿಕೆಯಾಗಿದೆ. ಬೆಂಗಳೂರು ಬಳಿಕ ಬಳ್ಳಾರಿಯಲ್ಲಿ ಅತೀ ಹೆಚ್ಚು ಅಂದರೆ 483 ಪ್ರಕರಣಗಳು ದಾಖಲಾಗಿವೆ.  ಉಳಿದಂತೆ ಉಡುಪಿಯಲ್ಲಿ 351 ಪ್ರಕರಣಗಳು, ಮೈಸೂರಿನಲ್ಲಿ 253 ಪ್ರಕರಣಗಳು, ದಾವಣಗೆರೆಯಲ್ಲಿ 245 ಪ್ರಕರಣಗಳು ಮತ್ತು ಕಲಬುರಗಿಯಲ್ಲಿ 210 ಪ್ರಕರಣಗಳು ಸೇರಿದಂತೆ ಬೆಂಗಳೂರು ಹೊರತು ಪಡಿಸಿ ರಾಜ್ಯಾದ್ಯಂತ ಒಟ್ಟು 6,231 ಪ್ರಕರಣಗಳು ದಾಖಲಾಗಿವೆ.

6,231 ಮಂದಿ ರೋಗಿಗಳು ಗುಣಮುಖ, ಬಿಡುಗಡೆ
ಇನ್ನು ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಗುಣಮುಖರ ಪ್ರಮಾಣ ಕೂಡ ಕ್ರಮೇಣ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 6,231 ಮಂದಿ ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಪೈಕಿ ಗುಣಮುಖರಾದವರ ಸಂಖ್ಯೆ  1,70,381ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ  82,149 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 30 ಜಿಲ್ಲೆಗಳಲ್ಲಿ 705 ಸೋಂಕಿತರು ಮಾತ್ರ ಐಸಿಯುನಲ್ಲಿದ್ದಾರೆ.

SCROLL FOR NEXT