ರಾಜ್ಯ

ಶೀಘ್ರದಲ್ಲೇ ಪಿಗ್ಮಿ ಸಂಗ್ರಾಹಕರ ಮೂಲಕವೂ ಗೃಹಸಾಲ ಪಾವತಿ: ಇಲ್ಲಿದೆ ಹೆಚ್ಚಿನ ಮಾಹಿತಿ 

Raghavendra Adiga

ಬೆಂಗಳೂರು: ಸರ್ಕಾರ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಕೈಗೆಟುಕುವ ಫ್ಲ್ಯಾಟ್‌ಗಳನ್ನು ಖರೀದಿಸಿದ ಬಡವರಿಗೆ ಗೃಹ ಸಾಲವನ್ನು ಸುಲಭವಾಗಿ ಪಾವತಿಸಲು ವಸತಿ ಇಲಾಖೆ ಶೀಘ್ರದಲ್ಲೇ ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. ಸಮನಾದ ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸುವ ಬದಲು, ಅವರು ಪಿಗ್ಮಿ ಸ್ಂಗ್ರಹಕಾರರ ಮೂಲಕ  ಪ್ರತಿದಿನ ಸಣ್ಣ ಮೊತ್ತವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಇದು ದೇಶದಲ್ಲೇ ಇಂತಹಾ ಮೊದಲ ಪ್ರಯೋಗ ಎನ್ನುತ್ತಿರುವ  ರಾಜ್ಯ ಸರ್ಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೊಸ ಉಪಕ್ರಮವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಒಂದು ಲಕ್ಷಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಈಗ ನಿರ್ಮಾಣ ಹಂತದಲ್ಲಿವೆ, ಅದರಲ್ಲಿ 50,000 ಬಿಬಿಎಂಪಿ ಮಿತಿಯಲ್ಲಿವೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಸತಿ ಯೋಜನೆಯಡಿ, ಒಂದು ಬಿಎಚ್‌ಕೆ ಮನೆಗೆ 10.56 ಲಕ್ಷ ರೂ., ದರ ನಿಗದಿಯಾಗಿದ್ದು ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಮಾನ್ಯರಿಗೆ 2.71 ಲಕ್ಷ ರೂ. ಮತ್ತು ಎಸ್‌ಸಿ / ಎಸ್‌ಟಿ ಫಲಾನುಭವಿಗಳಿಗೆ 3.50 ಲಕ್ಷ ರೂ. ಸಹಾಯಧನ ನೀಡಲಿದೆ,

ಸುಮಾರು 86,000 ಫಲಾನುಭವಿಗಳನ್ನು ಸರ್ಕಾರ ಆಯ್ಕೆ ಮಾಡಿದೆ. ಎರಡು ಬಿಎಚ್‌ಕೆ ಬೆಲೆ 15 ಲಕ್ಷ ರೂ. ಆಗಿದ್ದು ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು. 2 ಬಿಎಚ್‌ಕೆ  ಗಾಗಿ ಪಾವತಿ ಆಯ್ಕೆಗಳನ್ನು ನಂತರ ಪ್ರಾರಂಭಿಸಲಾಗುತ್ತದೆ. 

ಈ ಹೊಸ ಉಪಕ್ರಮವು ವಸತಿ ಸಚಿವ ವಿ ಸೋಮಣ್ಣ ಅವರ ಚಿಂತನೆಯ ಫಲ . ಹೆಚ್ಚಿನ ಫಲಾನುಭವಿಗಳು ದೈನಂದಿನ ಕೂಲಿ ಕಾರ್ಮಿಕರಾಗಿದ್ದು, ಇಎಂಐಗಳನ್ನು ಪಾವತಿಸಲು ಅವರಿಗೆ ಕಷ್ಟವಾಗಬಹುದು “ಅದಕ್ಕಾಗಿಯೇ ನಾವು ಪಿಗ್ಮಿ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ, ಅಲ್ಲಿ ಒಬ್ಬರು ಅಧಿಕೃತ ಪಿಗ್ಮಿ ಸಂಗ್ರಾಹಕರಿಗೆ ಪ್ರತಿದಿನ 50-100 ರೂ ನೀಡುವ ಮೂಲಕ ಸಾಲದ ಬಾಬತ್ತು ಕಡಿಮೆ ಮಾಡಿಕೊಳ್ಳಲ್ಬಹುದು. ಎಂದು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಲಿಮಿಟೆಡ್ ಅಧ್ಯಕ್ಷ ರಾಮ್ ಪ್ರಸತ್ ಮನೋಹರ್ ಹೇಳಿದ್ದಾರೆ.

"ನಾವು ಬ್ಯಾಂಕುಗಳಿಂದ ಪಿಗ್ಮಿ ಸಂಗ್ರಾಹಕರನ್ನು ನಮ್ಮತ್ತ ಕರೆಸಿಕೊಳ್ಳುತ್ತೇವೆ. ಮತ್ತು ಪ್ರತಿ ಪಿಗ್ಮಿ ಸಂಗ್ರಾಹಕರಿಗೆ 100 ಫಲಾನುಭವಿಗಳು ಮತ್ತು ಒಂದು ಹ್ಯಾಂಡ್ ಮೆಷಿನ್ ಸಹ ನೀಡುತ್ತೇವೆ. ಅವರು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗುತ್ತಾರೆ, ಮೊತ್ತವನ್ನು ಸಂಗ್ರಹಿಸುತ್ತಾರೆ ಮತ್ತು ಮೊತ್ತವನ್ನು ಸ್ಥಳದಲ್ಲಿಯೇ ಯಂತ್ರದಲ್ಲಿ ನಮೂದಿಸುತ್ತಾರೆ. ಕೂಡಲೇ ಫಲಾನುಭವಿಗೆ ಎಸ್‌ಎಂಎಸ್ ಸಂದೇಶ  ಕಳುಹಿಸಲಾಗುವುದು, ’’ 

ಈ ವಸತಿ ಯೋಜನೆ 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
 

SCROLL FOR NEXT