ಸನಾವುಲ್ಲಾ 
ರಾಜ್ಯ

ದಾವಣಗೆರೆ: ವಾಟ್ಸಾಪ್  ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್  ಪೇಜ್ ಹಂಚಿಕೊಂಡ ಕಾನ್‌ಸ್ಟೆಬಲ್  ಅಮಾನತು

ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ವಾಟ್ಸಾಪ್  ಗ್ರೂಪ್ ನಲ್ಲಿ  'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.

ದಾವಣಗೆರೆ: ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ವಾಟ್ಸಾಪ್  ಗ್ರೂಪ್ ನಲ್ಲಿ  'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.

ಬಸವನಗರ ಠಾಣೆಯ  ಪೊಲೀಸ್ ಕಾನ್‌ಸ್ಟೆಬಲ್ ಸನಾವುಲ್ಲಾ ಪಾಕ್ ಪರವಾದ ಫೇಸ್‌ಬುಕ್ ಪುಟವನ್ನು ಹಂಚಿಕೊಂಡು ಅಮಾನತು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದು ಇದೇ ರೀತಿಯ ಕೃತ್ಯಕ್ಕಾಗಿ ಈತ ಈ ಹಿಂದೆ 2014 ರಲ್ಲಿಸಹ ಒಮ್ಮೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ. 

2008 ಬ್ಯಾಚ್ ಪೊಲೀಸ್ ಟೀಂ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಅವರು 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪರಾಧಕ್ಕೆ ತಕ್ಷಣ ಜಾರಿಗೆ ಬರುವಂತೆ ಸನಾವುಲ್ಲಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಹನುಮಂತರಾಯ, ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸ್ ಉಪ ಅಧೀಕ್ಷಕ ಹಂತದ ಅಧಿಕಾರಿಯೊಬ್ಬರು ತನಿಖೆ ನಡೆಸಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್