ರಾಜ್ಯ

ಉ.ಕರ್ನಾಟಕದಲ್ಲಿ ಪ್ರವಾಹದಿಂದ ಹಲವು ಜಿಲ್ಲೆಗಳ ಕೃಷಿ ಭೂಮಿ ಹಾನಿ:ಸಿಎಂ ಯಡಿಯೂರಪ್ಪ ನಾಳೆ ವೈಮಾನಿಕ ಸಮೀಕ್ಷೆ

Sumana Upadhyaya

ಬಾಗಲಕೋಟೆ/ವಿಜಯಪುರ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆ ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಲಿದ್ದಾರೆ.

ಪಶ್ಚಿಮ ಘಟ್ಟಗಳು, ಕೃಷ್ಣಾ ನದಿ ತೀರದ ಪ್ರದೇಶಗಳು ಮತ್ತು ಅದರ ಉಪನದಿಗಳ ಸುತ್ತಮುತ್ತ(ಘಟಪ್ರಭಾ, ಮಲಪ್ರಭಾ, ಮರಕಂಡೇಯ, ದೂದ್ ಸಾಗರ ಮತ್ತು ವೇದಗಂಗಾ)ಗಳಲ್ಲಿ ಭಾರೀ ಮಳೆ ಸುರಿದಿರುವುದರಿಂದ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಲವು ಕಡೆ ಪ್ರವಾಹ ಉಂಟಾಗಿದೆ. ಇದರಿಂದ 20 ಸಾವಿರ ಹೆಕ್ಟೇರ್ ಕೃಷಿಭೂಮಿ ಹಾನಿಗೀಡಾಗಿದ್ದು ಹಲವು ಗ್ರಾಮಗಳು ಮತ್ತು ಹೆದ್ದಾರಿಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಧಕ್ಕೆಯಾಗಿದೆ.

ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಖ್ಯಮಂತ್ರಿಗಳು ಈ ಭಾಗಗಳಲ್ಲಿ ಒಂದು ದಿನದ ವೈಮಾನಿಕ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಅವರಿಗೆ ಕೆಲವು ಸಂಪುಟ ಸಚಿವರುಗಳು ಸಹ ಸಾಥ್ ನೀಡಲಿದ್ದಾರೆ.

SCROLL FOR NEXT