ರಾಜ್ಯ

ಮೈಸೂರು ರೈಲ್ವೆ ಕಾರ್ಯಾಗಾರದ ಸಾಧನೆ: ಬಿಇಎಂಎಲ್ ಗಾಗಿ ತಯಾರಾಯ್ತು ಮೋಟಾರ್ ಕೋಚ್ ವೀಲ್‌ಸೆಟ್‌

Raghavendra Adiga

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ರೈಲ್ವೆ ಕಾರ್ಯಾಗಾರವು ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‌ಗಳಿಗೆ (ಎಂಇಎಂಯು) ಹೊಚ್ಚ ಹೊಸ ವೀಲ್‌ಸೆಟ್‌ಗಳನ್ನು ಬಿಡುಗಡೆಮಾಡಿದೆ.

6 ವೀಲ್‌ಸೆಟ್‌ಗಳ ಮೊದಲ ಬ್ಯಾಚ್ ಅನ್ನು ಬಿಇಎಂಎಲ್‌ಗೆ ರವಾನಿಸಲು ಕಾರ್ಯಾಗಾರ ಸಿದ್ದತೆ ನಡೆಸಿದೆ.  188 ಟ್ರೈಲರ್ ಕೋಚ್ ಚಕ್ರಗಳು ಮತ್ತು 52 ಮೋಟಾರ್ ಕೋಚ್ ಚಕ್ರಗಳನ್ನು ಈವರೆಗೆ ತಯಾರಿಸಲಾಗಿದೆ. ದೆಹಲಿಯಲ್ಲಿ ಬಿಇಎಂಎಲ್ ಉತ್ಪಾದಿಸಿದ 8 ಕೋಚ್ ಎಂಇಎಂಯುಗಳಿಗೆ ವೀಲ್‌ಸೆಟ್‌ಗಳನ್ನು ಬಳಕೆ ಮಾಡಲಾಗುತ್ತದೆ. ಈ ಎಂಇಎಂಯು ಗಳು ಬೊಂಬಾರ್ಡಿಯರ್ ಪ್ರೊಪಲ್ಷನ್ ಉಪಕರಣಗಳನ್ನು ಹೊಂದಿರುತ್ತವೆ.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) 225 ಟ್ರೈಲರ್ ಕೋಚ್ ಕಾರ್ ಗಳಿಗೆ  900 ಟ್ರೈಲರ್ ಕೋಚ್ ವೀಲ್‌ಸೆಟ್‌ಗಳನ್ನು ಮತ್ತು 75 ಮೋಟಾರ್ ಕೋಚ್ ಕಾರ್ ಗಳಿಗೆ 300 ಮೋಟಾರ್ ಕೋಚ್ ವೀಲ್ ಸೆಟ್‌ಗಳನ್ನು ತಯಾರಿಸಲು ಮೈಸೂರು ಕಾರ್ಯಾಗಾರವನ್ನು ಕೋರಿತ್ತು ಇದರ ಭಾಗವಾಗಿ, ಮೈಸೂರು ಕಾರ್ಯಾಗಾರವು 160 ಕಿ.ಮೀ ವೇಗಕ್ಕೆ ಹೊಂದಿಕೊಳ್ಳುವಂತಹ ಅತಿ ವೇಗದ ಎಂಇಎಂ ಮೋಟಾರ್ ಕೋಚ್ ಚಕ್ರಗಳನ್ನು ತಯಾರಿಸಿದೆ. ಬೊಂಬಾರ್ಡಿಯರ್ ಅದರ ಗುಣಮಟ್ಟದ ಯೋಜನೆಯ ಪ್ರಕಾರ ಮೊದಲ ಬಾರಿಗೆ ಭಾರತೀಯ ರೈಲ್ವೆ ಕಾರ್ಯಾಗಾರದಲ್ಲಿ ಇಂತಹ ಚಕ್ರ ತಯಾರಿಕೆ ಯಶಸ್ವಿಯಾಗಿದೆ. 

ರೂ .2.4 ಕೋಟಿ ರು ಠೇವಣಿಯ ಯೋಜನೆಯಡಿ ಉತ್ಪಾದನೆ ನಡೆಯುತ್ತಿದೆ. ಡ್ರಿಲ್ ಬಿಟ್‌ಗಳು ಸೇರಿದಂತೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಅವುಗಳ ವೆಚ್ಚದಲ್ಲಿ ಬಿಇಎಂಎಲ್ ಪೂರೈಸಬೇಕಾಗಿದೆ. ನೈಋತ್ಯ ರೈಲ್ವೆಯ ಮೈಸೂರು ಕಾರ್ಯಾಗಾರವನ್ನು 1924 ರಲ್ಲಿ ಹಿಂದಿನ ಮೈಸೂರು ರಾಜ್ಯ ರೈಲ್ವೆಯ ಮೂಲ ಕಾರ್ಯಾಗಾರವಾಗಿ ಸ್ಥಾಪಿಸಲಾಯಿತು. 
 

SCROLL FOR NEXT