ಶಿವಪದ ರತ್ನಕೋಶ: ಆಧ್ಯಾತ್ಮಿಕ ಅರಿವಿಗೆ ದಾರಿದೀಪ! 
ರಾಜ್ಯ

ಶಿವಪದ ರತ್ನಕೋಶ: ಆಧ್ಯಾತ್ಮಿಕ ಅರಿವಿಗೆ ದಾರಿದೀಪ!

ಮಾನವ ಇತಿಹಾಸದಲ್ಲೇ ಅತಿ ಪ್ರಭಾವಿಯಾಗಿರುವ ಸಮತಾವಾದಿ ಸಾಮಾಜಿಕ ಚಳುವಳಿಯಾಗಿರುವ 12 ನೇ ಶತಮಾನದ ಶರಣ ಚಳುವಳಿ ಹಾಗೂ ಅದರ ಸಾಹಿತ್ಯದೆಡೆಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸಾಹಿತ್ಯ ಆಸಕ್ತರು ಹೆಚ್ಚು ಆಕರ್ಷಿತರಾಗಿದ್ದಾರೆ. 

ಬೆಂಗಳೂರು: ಮಾನವ ಇತಿಹಾಸದಲ್ಲೇ ಅತಿ ಪ್ರಭಾವಿಯಾಗಿರುವ ಸಮತಾವಾದಿ ಸಾಮಾಜಿಕ ಚಳುವಳಿಯಾಗಿರುವ 12 ನೇ ಶತಮಾನದ ಶರಣ ಚಳುವಳಿ ಹಾಗೂ ಅದರ ಸಾಹಿತ್ಯದೆಡೆಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸಾಹಿತ್ಯ ಆಸಕ್ತರು ಹೆಚ್ಚು ಆಕರ್ಷಿತರಾಗಿದ್ದಾರೆ. 

ಶಿವನ ಭಕ್ತಾದಿಗಳಾಗಿರುವ ಶರಣರು ಸಮಾಜದ ಎಲ್ಲಾ ಸ್ತರಗಳಿಂದಲೂ ಬಂದಿದ್ದು, ಸಾಮಾಜ್ಯ ಜನರ ಜೀವನದ ದಿನ ನಿತ್ಯದ ಅನುಭವಗಳನ್ನು ಆಧ್ಯಾತ್ಮಿಕ  ಪರಿಕಲ್ಪನೆಗಳೊಂದಿಗೆ ಹೇಳಲು ಅವರು ನೀಡಿರುವ ಪ್ರವಚನಗಳು ಈಗ ವಚನಗಳಾಗಿವೆ. 

ಇಂತಹ ವೀರಶೈವ ಕವಿಗಳ ಕೃತಿಗಳನ್ನು ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಆಳವಾದ ಅಧ್ಯಯನದ ಅಗತ್ಯವಿದೆ. ಇದಕ್ಕಾಗಿಯೇ ಜೆಎಸ್ಎಸ್ ಗ್ರಂಥಮಾಲೆ ಶಿವಪದ ರತ್ನಕೋಶ ಎಂಬ ಗ್ರಂಥವನ್ನು ಹೊರತಂದಿದೆ. 

ಶಿವಪದ ರತ್ನಕೋಶ ಎಂಬ ಗ್ರಂಥ ವೀರಶೈವ-ಲಿಂಗಾಯತರ ಸಾಹಿತ್ಯದ ನಿಘಂಟಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೂಡಿಬಂದಿದೆ. 

2011 ರಲ್ಲಿ ಈ ಯೋಜನೆಯನ್ನು ರೂಪುಗೊಳಿಸಲಾಗಿತ್ತು. ವಿದ್ವಾಂಸರ ತಂಡ ಹಾಗೂ ವರ್ಷಗಳ ಸತತ ಪರಿಶ್ರಮದಿಂದ ಶಿವಪದ ರತ್ನಕೋಶ ತಯಾರಾಗಿದ್ದು, 4,000 ಉಲ್ಲೇಖ (ಆಧಾರಕೊಡುವಿಕೆ) ಗಳನ್ನು 40,000 ಕ್ಕೂ ಹೆಚ್ಚು ವೀರಶೈವ ಸಾಹಿತ್ಯ ಮತ್ತು ವಚನಗಳ ಬಳಕೆಗಳನ್ನು ಹೊಂದಿದೆ. 

ಈ ಗ್ರಂಥಕ್ಕೆ ಸುತ್ತೂರು ಮಠದ ಶ್ರೀಗಳಾದ, ಗ್ರಂಥದ ಗೌರವ ಸಂಪಾದಕರೂ ಆಗಿರುವ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಮುನ್ನುಡಿ ಬರೆದಿದ್ದು ನಿರ್ದಿಷ್ಟ ಸಮುದಾಯ ಅಥವಾ ನಂಬಿಕೆಯ ಸಾಮಾಜಿಕ, ಆಧ್ಯಾತ್ಮಿಕ ಶಬ್ದಕೋಶವನ್ನು ತಿಳಿಸುವ ಪಾರಿಭಾಷಿಕ ಕೋಶದ ಮಹತ್ವವನ್ನು ಒತ್ತಿ ಹೇಳಿದ್ದಾರೆ. 

ಸರಳವಾದ ಭಾಷೆಯಲ್ಲಿ ಗೂಢಾರ್ಥಗಳನ್ನು ತಿಳಿಸಲಾಗಿದ್ದು, ವೀರಶೈವ-ಲಿಂಗಾಯತ ಸಾಹಿತ್ಯದ ಬಗ್ಗೆ ಸಮಗ್ರ, ವಿಸ್ತೃತ ನುಡಿಗಟ್ಟು ಪುಸ್ತಕದ ಬಲವಾದ ಅಗತ್ಯವಿರುವುದರಿಂದ ಯೋಜನೆ ಕಾರ್ಯರೂಪಕ್ಕೆ ಬಂದಿತು ಎನ್ನುತ್ತಾರೆ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ನಂದೀಶ್ ಹಂಚೆ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ