ರಾಜ್ಯ

ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ: ಒಂದೇ ವಾರದಲ್ಲಿ 3 ಕೋಟಿ ರೂ. ದಂಡ ವಸೂಲಿ

Lingaraj Badiger

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದೇ ವಾರದಲ್ಲಿ ಭಾರಿ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

ನವೆಂಬರ್ ಕೊನೆಯ ವಾರದಲ್ಲಿ ಬರೋಬ್ಬರಿ 3 ಕೋಟಿ ರೂ.ಗೂ ಅಧಿಕ ಮೊತ್ತದ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹಿಸಿದ್ದಾರೆ. ನ. 23ರಿಂದ 29ರವರೆರಗೆ ಬರೋಬ್ಬರಿ 79,359 ಪ್ರಕರಣಗಳನ್ನು ನಗರ ಟ್ರಾಫಿಕ್ ಪೊಲೀಸರು ದಾಖಲಿಸಿದ್ದಾರೆ.

ಹೆಲ್ಮೆಟ್ ಧರಿಸದ 26,118 ಪ್ರಕರಣ, ಸಿಗ್ನಲ್ ಜಂಪ್ ಮಾಡಿರುವ ಬಗ್ಗೆ 8,635 ಪ್ರಕರಣ ಮತ್ತು ನೋ ಎಂಟ್ರಿಯಲ್ಲಿ ವಾಹನ ನುಗ್ಗಿಸಿದವರ ಬಗ್ಗೆ 3,877 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಾರದಲ್ಲಿ 3 ಕೋಟಿ 34 ಲಕ್ಷದ 89 ಸಾವಿರದ 300 ರೂಪಾಯಿ(3,34,89,300) ದಂಡ ಸಂಗ್ರಹ ಮಾಡಿರುವುದಾಗಿ ಟ್ರಾಫಿಕ್ ಪೊಲೀಸ್ ಇಲಾಖೆಯು ಅಧಿಕೃತ ದಾಖಲೆ ಬಿಡುಗಡೆ ಮಾಡಿದೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವ ಪದ್ಧತಿಯನ್ನು ಕಳೆದ ಮಾರ್ಚ ತಿಂಗಳಿಂದ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ವಾಹನ ಓಡಾಟ ಹೆಚ್ಚಾದಂತೆ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಾಗಿದ್ದರಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ವಾಹನ ಚಾಲಕರನ್ನು ಭೌತಿಕವಾಗಿ ತಡೆದು ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆ ಈಗ ಮತ್ತಷ್ಟು ತೀವ್ರಗೊಂಡಿದೆ.

SCROLL FOR NEXT