ರಾಜ್ಯ

ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ: ಉತ್ತರ ಸಿಗದೆ ಉಳಿದಿವೆ ಡಜನ್ ಪ್ರಶ್ನೆಗಳು!

Shilpa D

ಬೆಂಗಳೂರು: ಅಪರಿಚಿತ ವ್ಯಕ್ತಿಗಳಿಂದ ಅಪಹರಣಕ್ಕೊಳಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. 

ನವೆಂಬರ್ 25 ರಂದು ಚಾಲಕ ಸುನೀಲ್ ಜೊತೆ ಪ್ರಕಾಶ್ ರನ್ನು ಕಿಡ್ನಾಪ್ ಮಾಡಿದವರು 30 ಕೋಟಿ ರು ಗೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿದ್ದಾರೆ,  ಆದರೆ ಪ್ರಕಾಶ್ ಕಿಡ್ನಾಪ್ ಆಗ ಮೂರು ದಿನ ಕಳೆದರೂ ಕುಟುಂಬಸ್ಥರು ಏಕೆ ಪೊಲೀಸರಲ್ಲಿ ದೂರು ದಾಖಲಿಸಲಿಲ್ಲ,

ನವೆಂಬರ್ 25ರಿಂದ ನವೆಂಬರ್ 27ರ ವರೆಗೆ ಅವರನ್ನು ಒತ್ತೆಯಾಗಿರಿಸಲಾಗಿತ್ತೆ? ಅಥವಾ  ಕುಟುಂಬಸ್ಥರ ಸಂಪರ್ಕದಲ್ಲಿದ್ದರೇ ಪ್ರಕಾಶ್? ಅವರ ಪೋನ್ ಕಾಲ್ ರೆಕಾರ್ಡ್ ನಿಂದ ಮತ್ತಷ್ಟು ವಿವರವಾದ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಿಡ್ನಾಪ್ ಕೇಸ್ ದಾಖಲಿಸಲು ವಿಳಂಬವಾಗಿದ್ದು ಏಕೆ ಎಂಬ ಪ್ರಶ್ನೆಗೆ ಪ್ರಕಾಶ್ ಯಾವ ಉತ್ತರವನ್ನು ನೀಡಿಲ್ಲ. ಪೊಲೀಸರಿಗೆ ಲಿಖಿತ ದೂರು ದಾಖಲಿಸಲು ಆರಂಭದಲ್ಲಿ ಪ್ರಕಾಶ್ ನಿರಾಕರಿಸಿದರು.

ಆದರೆ ಪ್ರಕಾಶ ಅವರ ಕಾರು ಆಲನಹಳ್ಳಿ ಕೆರೆ ಬಳಿ ಇರುವುದನ್ನು ಪೊಲೀಸರು ಹೇಳಿದ ಬಳಿಕ ಅವರು ಠಾಣೆಗೆ ಬಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಾದ ನಂತರ ಕಾರು ತಮ್ಮದೇ ಎಂದು ಒಪ್ಪಿಕೊಂಡ ಪ್ರಕಾಶ್ ನಡೆದ ಘಟನೆ ವಿವರಿಸಿದರು, ಆದರೆ ದೂರು ಕೊಡಲು ಒಪ್ಪಲಿಲ್ಲ, ಪೊಲೀಸರು ಹೆಚ್ಚಿನ ವಿವರಣೆ ಕೇಳಿದ ನಂತರವೇ ಲಿಖಿತ ದೂರು ಕೊಡಲು ಪ್ರಕಾಶ ಮುಂದಾದರು. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ, ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪ್ರಕಾಶ್ ಅವರೇ ತಿಳಿಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT