ಡಾರ್ಟ್ ರೇಸ್ 
ರಾಜ್ಯ

ಡಾರ್ಟ್ ರೇಸ್ ಪ್ರಿಯರಿಗೆ ಹೊಸ ಜಾಗ: ಕೋಲಾರ ಗುಡ್ಡಗಾಡು, ಬನ್ನೇರುಘಟ್ಟ ಪಾರ್ಕ್ ಅಂಚಿನಲ್ಲಿ ಸಾಹಸ ಪ್ರದರ್ಶನ!

ನಗರ ಪ್ರದೇಶದಲ್ಲಿ ನೆಲೆಸಿರುವವರು ಹೊರವಲಯದಲ್ಲಿ ರೇಸಿಂಗ್ ಹೋಗುವ ಕಾರ್ಯಕ್ರಮ ಹೊಸ ದಿಕ್ಕು ಪಡೆದುಕೊಳ್ಳುತ್ತಿದೆ. ಬೈಕ್ ಪ್ರಿಯರು ಈಗ ತಮ್ಮ ಕೌಶಲ್ಯ, ಚಾಕಚಕ್ಯತೆಗಳನ್ನು ಕೋಲಾರದ ಸುತ್ತಮುತ್ತಲ ಗುಡ್ಡಗಾಡು ಪ್ರದೇಶಗಳಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬದಿಗಳಲ್ಲಿ ಪ್ರದರ್ಶಿಸುತ್ತಾರೆ.

ಬೆಂಗಳೂರು: ನಗರ ಪ್ರದೇಶದಲ್ಲಿ ನೆಲೆಸಿರುವವರು ಹೊರವಲಯದಲ್ಲಿ ರೇಸಿಂಗ್ ಹೋಗುವ ಕಾರ್ಯಕ್ರಮ ಹೊಸ ದಿಕ್ಕು ಪಡೆದುಕೊಳ್ಳುತ್ತಿದೆ. ಬೈಕ್ ಪ್ರಿಯರು ಈಗ ತಮ್ಮ ಕೌಶಲ್ಯ, ಚಾಕಚಕ್ಯತೆಗಳನ್ನು ಕೋಲಾರದ ಸುತ್ತಮುತ್ತಲ ಗುಡ್ಡಗಾಡು ಪ್ರದೇಶಗಳಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬದಿಗಳಲ್ಲಿ ಪ್ರದರ್ಶಿಸುತ್ತಾರೆ.

ಕೋಲಾರದ ದೇವಸಮುದ್ರದ ಬೆಟ್ಟದಲ್ಲಿ ಇಬ್ಬರು ಬೈಕ್ ಪ್ರಿಯರು ಸಾಹಸ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಪರಿಸರ ಸಂರಕ್ಷಣಾಕಾರರು ಗುಡ್ಡಗಾಡು ಎಂದರೆ, ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ, ಹೆದ್ದಾರಿಯ ಪಕ್ಕದಲ್ಲಿ ಈ ಪ್ರದೇಶವಿದೆ ಎನ್ನುತ್ತಾರೆ.

ಕೊಡಗು ಜಿಲ್ಲೆಯ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಅಕ್ರಮ ಡಾರ್ಟ್ ರೇಸ್ ನಡೆದಿತ್ತು. ಅನೇಕ ಕಾರಣಗಳಿಗಾಗಿ ವಾಹನಗಳು ಅರಣ್ಯ ವಲಯಕ್ಕೆ ಪ್ರವೇಶಿಸಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಟೈರ್ ಟ್ರಾಕ್ ಗಳನ್ನು ಮಾತ್ರ ಪತ್ತೆಹಚ್ಚಿದ್ದರು. 

ಬನ್ನೇರುಘಟ್ಟ ವಲಯದಲ್ಲಿ ಸಹ ಇಂತಹದ್ದೇ ಡಾರ್ಟ್ ರೇಸ್ ತಂಡದ ಸುಳಿವು ಸಿಕ್ಕಿ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ರೇಸಿಂಗ್ ನಡೆಯುತ್ತದೆ ಎಂದು ಗೊತ್ತಾಗಿ ತಂಡವನ್ನು ಕಳುಹಿಸಿ ಅದನ್ನು ತಡೆಯಲಾಯಿತು ಎನ್ನುತ್ತಾರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಸಂರಕ್ಷಣಾಧಿಕಾರಿ ಬಿಎನ್ ಎನ್ ಮೂರ್ತಿ. 

ಬೆಂಗಳೂರಿನ ಸಾಹಸ ಮತ್ತು ರೇಸ್ ತಂಡಗಳು ತಮ್ಮ ಕೌಶಲ್ಯ ಪ್ರದರ್ಶನಕ್ಕಾಗಿ ನಗರದ ಹೊರವಲಯಗಳಿಗೆ ವಿಸ್ತರಿಸುತ್ತಿವೆ. ಕೋಲಾರದ ಹೊಲಾಲಿ ಗ್ರಾಮದ ಬಳಿ ಮೀಸಲಾದ ರೇಸಿಂಗ್ ಟ್ರ್ಯಾಕ್ ಇದೆ, ಅದರ ಹೊರತಾಗಿಯೂ, ಬೈಕ್‌ ಸವಾರರು ಸಾಹಸಕ್ಕಾಗಿ ದೇವಸಮುದ್ರ ಬೆಟ್ಟದ ಮೇಲೆ ಓಡುತ್ತಿರುವುದು ಕಂಡುಬಂತು. ಸ್ಥಳೀಯರು ಈ ಘಟನೆಯನ್ನು ವಿಡಿಯೋದಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೋಲಾರ ಅರಣ್ಯ ಉಪ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಈ ವಿಡಿಯೋ ಕಳೆದ ವರ್ಷದದ್ದಾಗಿದೆ ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು.

ಈ ಘಟನೆ ಇತ್ತೀಚೆಗೆ ಹೆದ್ದಾರಿಯ ಕಡೆಗೆ ಗುಡ್ಡಗಾಡುಗಳಲ್ಲಿ ಸಂಭವಿಸಿದೆ. ಆದರೆ, ಇಂತಹ ಘಟನೆ ಬೆಳಕಿಗೆ ಬಂದಿರುವುದು ಇದೇ ಮೊದಲು. “ಕೋಲಾರದ ಹೆಚ್ಚಿನ ಗುಡ್ಡಗಾಡುಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿವೆ, ಅಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೆಲವರು ಕಂದಾಯ ಇಲಾಖೆಯೊಂದಿಗಿದ್ದಾರೆ. ಪೆಟ್ರೋಲಿಂಗ್ ತೀವ್ರಗೊಳಿಸಲಾಗುವುದು. ಅಂತಹ ಚಟುವಟಿಕೆಗಳ ಬಗ್ಗೆ ನಮಗೆ ಮಾಹಿತಿ ನೀಡಲು ಸ್ಥಳೀಯರು ಭಾಗಿಯಾಗುತ್ತಾರೆ. ಗುಡ್ಡಗಳು ಚಿರತೆಗಳು ಮತ್ತು ಇತರ ವನ್ಯಜೀವಿಗಳಿಗೆ ನೆಲೆಯಾಗಿದೆ, ಇಂತಹ ಕಡೆ ರೇಸಿಂಗ್, ಸಾಹಸ ಮಾಡಿದರೆ ಅನನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT