ಸಂಗ್ರಹ ಚಿತ್ರ 
ರಾಜ್ಯ

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿ, ಸಂಜನಾ ಕೂದಲು ಪರೀಕ್ಷೆಗೆ ಹೈಕೋರ್ಟ್ ಸಮ್ಮತಿ

ಮಾದಕ ವಸ್ತು ಮಾರಾಟ ಪ್ರಕರಣದ ಆರೋಪಿಗಳಾದ ಕನ್ನಡ ಚಲನಚಿತ್ರ ರಂಗದ ಇಬ್ಬರು ಖ್ಯಾತ ನಟಿಯವರು ಹಾಗೂ ಅವರ ಸ್ನೇಹಿತರ ತಲೆಗೂದಲನ್ನು ಪರೀಕ್ಷೆಗೆ ಒಳಪಡಿಸಲು ಸಿಸಿಬಿಗೆ ಎನ್'ಡಿಪಿಎಸ್ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ. 

ಬೆಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣದ ಆರೋಪಿಗಳಾದ ಕನ್ನಡ ಚಲನಚಿತ್ರ ರಂಗದ ಇಬ್ಬರು ಖ್ಯಾತ ನಟಿಯವರು ಹಾಗೂ ಅವರ ಸ್ನೇಹಿತರ ತಲೆಗೂದಲನ್ನು ಪರೀಕ್ಷೆಗೆ ಒಳಪಡಿಸಲು ಸಿಸಿಬಿಗೆ ಎನ್'ಡಿಪಿಎಸ್ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ. 

ಆರೋಪಿಗಳು ಮಾದಕ ವಸ್ತು ಸೇವಿಸಿರುವುದನ್ನು ನ್ಯಾಯಾಲಯದಲ್ಲಿ ರುಜುವಾತುಪಡಿಸಲು ಕೂದಲು ಪರೀಕ್ಷೆ ವರದಿ ಬಹುಮುಖ್ಯ ವೈದ್ಯಕೀಯ ಸಾಕ್ಷ್ಯವಾಗಲಿದೆ. ಈ ಹಿಂದೆ ಪರೀಕ್ಷೆ ಸಲುವಾಗಿ ಆರೋಪಿಗಳಿಂದ ಕೂದಲು ಸಂಗ್ರಹಿಸಲಾಗಿತ್ತು. ಆದರೆ, ಪರೀಕ್ಷೆ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದಕ್ಕೆ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯ ಕೂದಲು ಪರೀಕ್ಷೆಗೊಳಪಡಿಸದೆ ಮರಳಿಸಿತ್ತು. 

ಬಂಧನಕ್ಕೊಳಗಾದಾಗಿನಿಂದಲೂ ಇಬ್ಬರೂ ನಟಿಯಲು ತನಿಖೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಅವರ ಕೂದಲು ಪರೀಕ್ಷೆಗೊಳಪಡಿಸಲು ವಿಶೇಷ ನ್ಯಾಯಾಲಯದ ಅನುಮತಿ ಕೋರಿದ್ದೆವು. ಈ ಹಿಂದೆ ರಾಗಿಣಿಯವರು ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ಮುಂದಾಗಿದ್ದೆವು. ಆದರೆ, ರಾಗಿಣಿ ಮೂತ್ರ ನೀಡುವ ಬದಲು ನೀರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಕೂದಲಿನ ಮಾದರಿಗಳನ್ನು ಸಂಗ್ರಹಿಸುವ ವೇಳೆ ಕೆಲ ವಿಧಾನಗಳನ್ನು ಅನುಸರಿಸುವಂತೆ ಹೈದರಾಬಾದ್‌ನ ಎಫ್‌ಎಸ್‌ಎಲ್ ಸಿಸಿಬಿಯನ್ನು ಈ ಹಿಂದೆ ಕೇಳಿಕೊಂಡಿತ್ತು, ಆದರೆ ನಟಿಯರಿಬ್ಬರೂ ಕೂದಲು ಮಾದರಿ ನೀಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.  ನಟಿಯರಿಬ್ಬರೂ ಡ್ರಗ್ಸ್ ಸೇವನೆ ಮಾಡಿರುವ ಶಂಕೆಗಳಿದ್ದು, ಇದನ್ನು ಸಾಬೀತು ಪಡಿಸಲು ಕೂದಲು ಪರೀಕ್ಷೆ ವರದಿ ಬಹುಮುಖ್ಯ ವೈದ್ಯಕೀಯ ಸಾಕ್ಷ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT