ರಾಜ್ಯ

ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಸರ್​ ಎಂ. ವಿಶ್ವೇಶ್ವರಯ್ಯ ಹೆಸರು: ರಾಜ್ಯ ಸರ್ಕಾರ ಮಹತ್ವದ ಆದೇಶ

Raghavendra Adiga

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣ ಇನ್ನು ಮುಂದೆ"ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ" ಎಂದು ಕರೆಯಲ್ಪಡಲಿದೆ.

ಈ ಸಂಬಂಧ ವಿಶೇಷ ಕರ್ನಾಟಕ ರಾಜ್ಯಪತ್ರ ಹೊರಡಿಸಿರುವ ಸರ್ಕಾರ, ಸರ್. ಎಂ. ವಿಶ್ವೇಶ್ವರಯ್ಯ  ಹೆಸರನ್ನು ರೈಲು ನಿಲ್ದಾನಾಕ್ಕೆ  ಇಡಲು ಆದೇಶಿಸಿದೆ. ನಿಲ್ದಾಣದಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ದೇವನಾಗರಿ ಭಾಷೆಗಳಲ್ಲಿ ವಿಶ್ವೇಶ್ವರಯ್ಯ ಹೆಸರಿನ ನಾಮಫಲಕ ಅಳವಡಿಕೆ ಮಾಡಲಾಗುತ್ತದೆಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ. 

ಇದಕ್ಕೆ ಹಿಂದೆ ಮೆಜೆಸ್ಟಿಕ್ ನಲ್ಲಿರುವ ಕೇಂದ್ರ ರೈಲು ನಿಲ್ದಾಣಕ್ಕೆ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ" ಎಂದು ನಾಮಕರಣ ಮಾಡಲಾಗಿತ್ತು

SCROLL FOR NEXT