ರಾಜ್ಯ

'ಲವ್ ಜಿಹಾದ್' ಮಸೂದೆ ಮುಂದಿನ ಅಧಿವೇಶನದಲ್ಲಿ ಮಂಡನೆ: ಸಿಎಂ ಯಡಿಯೂರಪ್ಪ

Raghavendra Adiga

ಬೆಂಗಳೂರು: ಕರ್ನಾಟಕ ವಿಧಾನಸಭೆ ದ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ತರಲಾಗುವುದು ಎಂದು ಕರ್ನಾಟಕ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದ್ದು ಮುಂದಿನ ಅಧಿವೇಶನದಲ್ಲಿ "ಲವ್ ಜಿಹಾದ್" ವಿರುದ್ಧ ಕಾನೂನು ಕೈಗೆತ್ತಿಕೊಳ್ಳುತ್ತೇವೆ ಎಂದುಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

"ಗೋ ಹತ್ಯೆ ನಿಷೇಧ ಕಾನೂನನ್ನು ಮೊದಲೇ (ಹಿಂದಿನ ಅಧಿಕಾರಾವಧಿಯಲ್ಲಿ) ಮಂಡಿಸಿದ್ದೆವು, ಆದರೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ ಈಗ ಅದನ್ನು ಮತ್ತೊಮ್ಮೆ ಮಂಡಿಸಲು ನಾನು ಕಾನೂನು ಸಚಿವರನ್ನು ಕೇಳಿದ್ದೇನೆ. ಅದನ್ನು ನಾಳೆ ಅಥವಾ ನಂತರದ ದಿನದಲ್ಲಿ ಮಂಡಿಸಲಾಗುವುದು ಮತ್ತು ನಾವು ಅದಕ್ಕೆ ಅನುಮೋದನೆ ಪಡೆಯುತ್ತೇವೆ." ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದರು.

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲವ್ ಜಿಹಾದ್, ಕಾಯಿದೆಯನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಯೋಜಿಸಿದ್ದೇವೆ,. ಈ ಅಧಿವೇಶನದಲ್ಲಿ ನಾವು ಅದನ್ನು ಮಂಡಿಸುವುದಿಲ್ಲ. ಗೋ ಹತ್ಯೆ ನಿಷೇಧ ಮಸೂದೆ ಮಾತ್ರ ಈಗ ಮಡನೆಯಾಗಲಿದೆ" ಎಂದರು.

ಎರಡು ಮಸೂದೆಗಳ ಅಂಗೀಕಾರ ಮತ್ತು ಅನುಷ್ಠಾನಕ್ಕೆ ಬಿಜೆಪಿಯ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಶನಿವಾರ ನಿರ್ಣಯಗಳನ್ನು ಅಂಗೀಕರಿಸಿದೆ.

ಈ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರಲು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ ಕಂದಾಯ ಸಚಿವ ಆರ್.ಅಶೋಕ, ಮುಂದಿನ ಅಧಿವೇಶನದಲ್ಲಿ "ಲವ್ ಜಿಹಾದ್" ವಿರುದ್ಧದ ಮಸೂದೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಸುವನ್ನು ರೈತರು ದೇವರಂತೆ ಪೂಜಿಸುತ್ತಾರೆ ... ಭಾರತೀಯ ಸಂಸ್ಕೃತಿಯಲ್ಲಿ ಹಸುಗಳಿಗೆ ವಿಶೇಷ ಸ್ಥಾನವಿದೆ, ಆದ್ದರಿಂದ ಅದರ ಹತ್ಯೆಯನ್ನು ತಡೆಯಲು ನಾವು ಕರ್ನಾಟಕದಲ್ಲಿ ಈ ಕಾನೂನನ್ನು ತರುತ್ತಿದ್ದೇವೆ. ಈ ಅಧಿವೇಶನದಲ್ಲಿ ಲವ್ ಜಿಹಾದ್ ಮಸೂದೆ ಮಂಡನೆ ಇಲ್ಲ, ಮುಂದಿನ ಅಧಿವೇಶನದಲ್ಲಿ ನಾವು ಲವ್ ಜಿಹಾದ್  ಮಸೂದೆ ತರುತ್ತೇವೆ.

"ಲವ್ ಜಿಹಾದ್" ವಿರುದ್ಧ ರಾಜ್ಯವು ಕಾನೂನು ಹೊಂದಲಿದೆಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಹೇಳಿದ್ದರು, ಮತ್ತು ಈ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಘೋಷಿಸಲಾದ ಸುಗ್ರೀವಾಜ್ಞೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಬಲವಂತದ ಅಥವಾ ಮೋಸದ ಧಾರ್ಮಿಕ ಮತಾಂತರದ ವಿರುದ್ಧ ಉತ್ತರ ಪ್ರದೇಶವು ಇತ್ತೀಚೆಗೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು.ಇದು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ವಿವಿಧ ವರ್ಗಗಳ ಅಡಿಯಲ್ಲಿ 50,000 ರೂ. ದಂಡದ ಶಿಕ್ಷೆ ಒಳಗೊಂಡಿದೆ.

2018 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಗೋಹತ್ಯೆಯನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು.

SCROLL FOR NEXT