ಪಿಎಚ್ ಡಿ ಪಡೆದ ಮನುಕುಮಾರ್ 
ರಾಜ್ಯ

ಕಣ್ಣು ಹೋದರೂ ಕನಸು ಬಿಡದ‌ ಛಲದಂಕ: ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ

ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್​​ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ.

ಚಾಮರಾಜನಗರ: ಕಣ್ಣಿದ್ದವರೇ ಓದು ತಲೆಗೆ ಹತ್ತದೇ ಇಲ್ಲವೇ ನಿರಾಸಕ್ತಿಯಿಂದ ಅರ್ಧಕ್ಕೆ ವಿದ್ಯೆ ನಿಲ್ಲಿಸುವವರ ನಡುವೆ ಈ‌ ಅಂಧ ವ್ಯಕ್ತಿ ಮೈಸೂರು ವಿವಿಯಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್ಡಿಗೆ ಭಾಜನರಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್​​ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ.

ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ
ಮೈವಿವಿಯ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್‌.ಎನ್‌.ದಿನೇಶ್ ಮಾರ್ಗದರ್ಶನದಲ್ಲಿ "ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ-ಒಂದು ಅಧ್ಯಯನ" ಎಂಬ ವಿಷಯದಲ್ಲಿ ಮಹಾಪ್ರಬಂಧ  ಮಂಡಿಸಿ ಪಿಎಚ್ ಅಡಿ ಪದವಿ ಪಡೆದಿದ್ದಾರೆ. ಮೂರುವರೆ ವರ್ಷ 105 ಶಾಲೆಯ 354 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ಸಂಶೋಧನಾ ಪ್ರಬಂಧ ಬರೆದಿದ್ದಾರೆ.

ಬ್ರೈಲ್ ಲಿಪಿ ಬಳಸಲ್ಲ, ವಿಶೇಷ ಶಾಲೆಗೆ ಹೋಗಿಲ್ಲ:
ಮನುಕುಮಾರ್ ಅವರ ಏಕಾಗ್ರತೆಗೆ ಸಾಕ್ಷಿ ಎಂಬಂತೆ ಇಲ್ಲಿಯವರೆಗೂ ಅಂಧರು ಬಳಸುವ ಯಾವುದೇ ಸಾಧನವನ್ನು ಬಳಸದೇ ಸಾಮಾನ್ಯರಂತೆ ಓಡಾಟ ನಡೆಸುತ್ತಾರೆ. ಜೊತೆಗೆ, ಟೇಪ್ ರೆಕಾರ್ಡರ್, ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು  ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು ಈ ಸಾಧನೆ ಮಾಡಿದ್ದಾರೆ

ವರದಿ: ಗುಳಿಪುರ ನಂದೀಶ. ಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT