ರಾಜ್ಯ

ಮೈಸೂರು: ರೈಲ್ವೆಗಾಗಿ ನಂಜನಗೂಡು ಬಳಿ ಕಂಟೈನರ್ ಡಿಪೋ ನಿರ್ಮಾಣ

Lingaraj Badiger

ಮೈಸೂರು: ನಂಜನಗೂಡು ತಾಲ್ಲೂಕಿನ ಕಡಕೋಳದಲ್ಲಿ ಬಹುನಿರೀಕ್ಷಿತ ಮಲ್ಟಿ-ಮೋಡಲ್ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್‌ಪಿ) ನಿರ್ಮಾಣವನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ (ಕನ್ಕಾರ್) ಕೈಗೆತ್ತಿಕೊಂಡಿದೆ.

2022ರ ವೇಳೆಗೆ ಕಂಟೈನರ್ ಡಿಪೋ ಕಾರ್ಯಾರಂಭ ಮಾಡಲಿದೆ. ವೈಟ್‌ಫೀಲ್ಡ್ ಮತ್ತು ಮಂಗಳೂರು ನಂತರ ರಾಜ್ಯದಲ್ಲಿ ಕನ್ಕಾರ್ ನ ಮೂರನೇ ಕಂಟೈನರ್ ಡಿಪೋ ಇದಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ ಸರಕುಗಳ ಸಾರಿಗೆ ವೆಚ್ಚ ಅಗ್ಗವಾಗಲಿದೆ. ಅಲ್ಲದೆ, ಈ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಶನಿವಾರ ಇಲ್ಲಿ ನಡೆದ ಸಂವಾದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಅರಮನೆ ನಗರಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ಪಡೆಯುತ್ತಿದೆ. ಭೂಸ್ವಾಧೀನ ಸಮಸ್ಯೆಯಿಂದ ಕಂಟೈನರ್ ಡಿಪೋ ಯೋಜನೆ ರದ್ದುಗೊಂಡಿತ್ತು. ರೈತರು ಮತ್ತು ಸಂಬಂಧಿತ ಇಲಾಖೆಗಳ ನಡುವೆ ಸೌಹಾರ್ದ ಮಾತುಕತೆಗಳಿಂದ ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.

ಕೆಐಎಡಿಬಿ ಸ್ವಾಧೀನಪಡಿಸಿಕೊಂಡ 62 ಎಕರೆ ಜಮೀನನಲ್ಲಿ ಕಂಟೈನರ್ ಡಿಪೋ ತಲೆಎತ್ತಲಿದೆ. ಈಗಾಗಲೇ 55.02 ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ಕನ್ಕಾರ್ ನ ಗ್ರೂಪ್ ಜನರಲ್ ಮ್ಯಾನೇಜರ್ ಅನುಪ್ ದಯಾನಂದ ಸಾಧು ಹೇಳಿದ್ದಾರೆ.

SCROLL FOR NEXT