ಬೊಮಾನ್ ಇರಾನಿ 
ರಾಜ್ಯ

ಬೆಂಗಳೂರು: ನಟ ಬೊಮಾನ್ ಇರಾನಿ ಸಹೋದರಿ ಮನೆಯಲ್ಲಿ ಕಳ್ಳತನ, ಇಬ್ಬರ ಬಂಧನ

ಬಾಲಿವುಡ್‌ ನಟ ಬೊಮಾನ್‌ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್‌ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಬಾಲಿವುಡ್‌ ನಟ ಬೊಮಾನ್‌ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್‌ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ನಿವಾಸಿಗಳಾದ ಮೇರಿ ಅಲಿಸ್‌ ಹಾಗೂ ಈಕೆಯ ಮೈಕೆಲ್‌ ವಿನ್ಸೆಂಟ್‌ ಬಂಧಿತರು. ಅಬ್ಬಾಸ್‌ ಅಲಿ ರಸ್ತೆಯಲ್ಲಿರುವ ಎಂಬೆಸ್ಸಿ ಕ್ರೌನ್‌ ಅಪಾರ್ಟ್‌ಮೆಂಟ್‌ ನಿವಾಸಿಯೂ ಆದ ಬಾಲಿವುಡ್‌ ನಟ ಬೊಮನ್‌ ಇರಾನಿ ಸೋದರ ಸಂಬಂಧಿ ಖುರ್ಷೀದ್‌ ಇರಾನಿ ಅವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಖುರ್ಷೀದ್‌ ಇರಾನಿ ಅವರು ಅವರ ಕುಟುಂಬ ಅಬ್ಬಾಸ್‌ ಅಲಿ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ನೆಲೆಸಿದೆ. ಕಳೆದ 28 ವರ್ಷಗಳಿಂದ ಬಂಧಿತೆ ಮೇರಿ ಖುರ್ಷಿದ್‌ ಅವರ ಮನೆ ಕೆಲಸ ಮಾಡಿಕೊಂಡಿದ್ದಳು. ಹಲವು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೇರಿ ಮನೆಯವರು ನಂಬಿಕೆಗಳಿಸಿದ್ದ ಕಾರಣ, ಆಕೆ ಮನೆಯಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು.

ಖುರ್ಷೀದ್‌ ಅವರು ಮನೆಯ ಲಾಕರ್‌ನಲ್ಲಿ 100 ಗ್ರಾಂ ತೂಕದ ಒಂಬತ್ತು ಚಿನ್ನದ ಬಿಸ್ಕೆಟ್‌, .85 ಲಕ್ಷ ನಗದು ಹಾಗೂ 11 ಲಕ್ಷ ಮೌಲ್ಯದ 15 ಸಾವಿರ ಯುಎಸ್‌ ಕರೆನ್ಸಿಗಳನ್ನು ಇಟ್ಟಿದ್ದರು. ನ.29ರಂದು ಲಾಕರ್‌ ನೋಡಿದಾಗ ಚಿನ್ನದ ಬಿಸ್ಕೆಟ್‌, ನಗದು ಹಾಗೂ ವಿದೇಶಿ ಕರೆನ್ಸಿ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಖುರ್ಷೀದ್‌ ಅವರು ಮನೆ ಕೆಲಸ ಮಾಡುತ್ತಿದ್ದ ಮೇರಿ ಮೇಲೆ ನೇರವಾಗಿ ಆರೋಪ ಹೊರಿಸಿ ಹಲಸೂರು ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ವೆಂಕಟಾಚಲಪತಿ ನೇತೃತ್ವದ ತಂಡ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಳು. ಈಕೆ ಕೊಟ್ಟಮಾಹಿತಿ ಮೇರೆಗೆ ಆಕೆಯ ಪುತ್ರನನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT