ರಾಜ್ಯ

ಮುಷ್ಕರ ಹಿಂಪಡೆಯುವ ಆಲೋಚನೆ ಇದೆ: ಕೋಡಿಹಳ್ಳಿ ಚಂದ್ರಶೇಖರ್

Srinivasamurthy VN

ಬೆಂಗಳೂರು: ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಆಲೋಚನೆ ಮಾಡಿದ್ದೇವೆ ಎಂದು ಹಸಿರು ಸೇನೆ ಮತ್ತು ಸಾರಿಗೆ ನೌಕರರ ಸಂಘಟನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ರೀಡಂ ಪಾರ್ಕ್​ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಚರ್ಚೆ ಮಾಡಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು‌.

ಫ್ರೀಡಂ ಪಾರ್ಕ್ ಗೆ ತೆರಳಿ ಅಲ್ಲಿ ಉಪವಾಸದ ವೇಳೆ ಸಭೆ ನಡೆಸಲಾಗುತ್ತದೆ. ಸಾರಿಗೆ ಅವ್ಯವಸ್ಥೆಯಿಂದಾಗಿ ಜನರಿಗೆ ತೊಂದರೆಯಾಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳಿಂದಾಗಿ ಮುಷ್ಕರ ಮುಂದುವರೆಸಲಾಗಿತ್ತು. ಸರ್ಕಾರದ ನಿಲುವು ಏನೇ ಇದ್ದರೂ ಇಂದು ಬಹುತೇಕ ಮುಷ್ಕರ  ಅಂತಿಮ ಘಟ್ಟಕ್ಕೆ ಬರುವ ನಿರೀಕ್ಷೆ ಇದೆ. ಸರ್ಕಾರದ ಗೊಂದಲದ ನಿಲುವಿನಿಂದಾಗಿ ಮುಷ್ಕರ ಮುಂದುವರೆಸಲಾಗಿತ್ತು. ಈಗ ಎಲ್ಲವನ್ನೂ ವೇದಿಕೆಯಲ್ಲಿ ಸ್ಪಷ್ಟಪಡಿಸಲಾಗುತ್ತದೆ. ನಮ್ಮ ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದು ಘೋಷಣೆ ಮಾಡುತ್ತೇವೆ. ಸರ್ಕಾರ ಏನೇ ಮಾಡಲಿ  ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ ಅಷ್ಟೇ.. ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಇದೀಗ ಸರ್ಕಾರದ ಗಮನಕ್ಕೆ ಅವರ ಬೇಡಿಕೆಗಳನ್ನು ತರಲಾಗಿದೆ. 

ಆದರೆ ಈ ಬಗ್ಗೆ ಸರ್ಕಾರದ ನಿಲುವಿಗೆ ಸಂಬಂಧಿಸಿದಂತೆ ನೌಕರರಿಗೆ ಖುಷಿ ಇಲ್ಲ, ನೌಕರರ 9 ಬೇಡಿಕೆಗಳ ಈಡೇರಿಕೆ ಕುರಿತ ಸರ್ಕಾರ ನಿರ್ಧಾರದಲ್ಲಿ ನ್ಯೂನ್ಯತೆಗಳಿವೆ, ಈ ಬಗ್ಗೆ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಚಂದ್ರಶೇಖರ್  ಹೇಳಿದ್ದಾರೆ.

SCROLL FOR NEXT