ರಾಜ್ಯ

ಸಿಲಿಕಾನ್ ಸಿಟಿಯ ಅಕ್ರಮ ಧಾರ್ಮಿಕ ಕಟ್ಟಡಗಳ ಬಗ್ಗೆ ಕುರುಡಾದ ಬಿಬಿಎಂಪಿ: ಹೈಕೋರ್ಟ್ ತರಾಟೆ

Raghavendra Adiga

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಕಾರ್ಯವನ್ನು ಬಿಬಿಎಂಪಿ ಗಂಭೀರವಾಗಿ ಕೈಗೊಂಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗಮನಿಸಿದೆ. ಬೆಂಗಳೂರಿನಲ್ಲಿ ಕೇವಲ 106  ಅಂತಹಾ ಅಕ್ರಮ ಧಾರ್ಮಿಕ ಕಟ್ಟಡ ಇದೆ ಎಂದು ಯಾರೂ ನಂಬುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠವು ಈ ಸುಮೋ ಮೋಟು ಪಿಐಎಲ್ ವಿಚಾರಣೆ ನಡೆಸಿದ್ದು ಬಿಬಿಎಂಪಿ ಆಯುಕ್ತರಿಗೆ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು

ನ್ಯಾಯಾಂಗ ನಿಂದನೆನೋಟಿಸ್ ನೀಡಿದ್ದರೂ ಸುಒರೀಂ ಕೋರ್ಟ್ ಹಾಗೂ ಹೈಕೋರ್ಟ್ ಹೊರಡಿಸಿದ ಆದೇಶಗಳನ್ನು ಪಾಲಿಸಲು ಯಾವುದೇ ಗಂಭೀರ ಕ್ರಮ ತೆಗೆದುಕೊಂಡಿಲ್ಲವಾದ್ದರಿಂದ ಬಿಬಿಎಂಪಿ ಸಲ್ಲಿಸಿದ ಅಫಿಡವಿಟ್‌ಗಳು ತೃಪ್ತಿಕರವಾಗಿಲ್ಲಎಂದು ನ್ಯಾಯಪೀಠ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದ ದಿನಾಂಕ -ಸೆಪ್ಟೆಂಬರ್ 29, 2009 ಅಥವಾ ಅದರ ಮೊದಲು/ ನಂತರ ಆ ರಚನೆಗಳನ್ನು ನಿರ್ಮಿಸಲಾಗಿದೆಯೆ ಎಂದು ಬಿಬಿಎಂಪಿ ನಿರ್ದಿಷ್ಟಪಡಿಸಿಲ್ಲ ಸುಪ್ರೀಂ ಕೋರ್ಟ್ ಆದೇಶವು ಅವುಗಳನ್ನು ಯಾವಾಗ ನಿರ್ಮಿಸಲಾಗಿದೆ ಎಂಬುದರ ಆಧಾರದ ಮೇಲೆ ತೆಗೆದುಕೊಳ್ಳಬೇಕಾದ ಕ್ರಮವನ್ನು ಸೂಚಿಸುತ್ತದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸಲ್ಲಿಸಿದ ಅಫಿಡವಿಟ್ ಕೇವಲ ಸಾಂಕ್ರಾಮಿಕ ರೋಗದಿಂದ ಕ್ರಮ ಕೈಗೊಳ್ಳಲು ವಿಳಂಬವಾಗಿದೆ ಎಂದು ಹೇಳಿದೆ. ಮಾತ್ರವಲ್ಲದೆ 2020 ರ ಮಾರ್ಚ್ ನಂತರ ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸುತ್ತೋಲೆಯಲ್ಲಿ ಅಕ್ರಮ ರಚನೆಗಳನ್ನು ಗುರುತಿಸಲು. ಖಚಿತ ದಿನಾಂಕವನ್ನು ನಿಗದಿಪಡಿಸಲಾಗಿದೆ.

SCROLL FOR NEXT