ರಾಜ್ಯ

ಬೆಂಗಳೂರು ನಗರಕ್ಕೆ ಹೊಸ ನೋಟ, ಸೌಂದರ್ಯ ನೀಡಲು ರಾಜ್ಯ ಸರ್ಕಾರ ಮುಂದು: ನೀಲನಕ್ಷೆ ತಯಾರಿ, ಭರವಸೆಗಳ ಮಹಾಪೂರ 

Sumana Upadhyaya

ಬೆಂಗಳೂರು: ಐಟಿ ಸಿಟಿ,ಉದ್ಯಾನನಗರಿ ಬೆಂಗಳೂರಿಗೆ ಹಲವು ಭರವಸೆಗಳ ಮಹಾಪೂರವನ್ನೇ ಸಿಎಂ ಬಿ ಎಸ್ ಯಡಿಯೂರಪ್ಪ ಹರಿಸಿದ್ದಾರೆ. 

ಬೆಂಗಳೂರು ವಿಷನ್ 2020ರಿಂದ ಪಾರ್ಕ್, ಫ್ಲೈ ಓವರ್ ವರೆಗೆ ಬೆಂಗಳೂರು ಬಗ್ಗೆ ಹಲವು ದೂರದೃಷ್ಟಿ ಹರಿಸಿದ್ದಾರೆ. ಈ ಮೂಲಕ ಬೆಂಗಳೂರು ನಗರಕ್ಕೆ ಹೊಸ ನೋಟ ನೀಡಲು ಹೊರಟಿದ್ದಾರೆ. ವಿಧಾನ ಸೌಧದಿಂದ ವರ್ಚುವಲ್ ಸಭೆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಕಾಮಗಾರಿಗಳಿಗೆ, ಅಭಿಯಾನಗಳಿಗೆ ಚಾಲನೆ ನೀಡಲಿದ್ದಾರೆ. 

ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದರೂ ಕೂಡ ಅದಕ್ಕೆ ಸಿದ್ದತೆ ಮಾಡಿಕೊಂಡಿರುವಂತಿದೆ.

ತಜ್ಞರ ಸಮಿತಿ ಶಿಫಾರಸು ಮೇರೆಗೆ ನಗರದ ಒಟ್ಟಾರೆ ಬೆಳವಣಿಗೆ ಬಗ್ಗೆ ನೀಲನಕ್ಷೆ ಸಿದ್ದಪಡಿಸಲಾಗಿದೆ. ಅವುಗಳಲ್ಲಿ 20 ಎಕರೆ ಪಶ್ಚಿಮ ಬೆಂಗಳೂರಿನಲ್ಲಿರುವ ಮೈಸೂರು ಲ್ಯಾಂಪ್ಸ್ ಆಸ್ತಿಯನ್ನು ಟ್ರೀ ಪಾರ್ಕ್ ಆಗಿ ಮಾಡುವುದು, ಅದು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿರುತ್ತದೆ. ದಕ್ಷಿಣ ಮತ್ತು ಪೂರ್ವ ಬೆಂಗಳೂರಿನಂತೆ ಪಶ್ಚಿಮ ಬೆಂಗಳೂರನ್ನು ಆಧುನೀಕರಣಗೊಳಿಸಬೇಕೆನ್ನುವುದಾಗಿದೆ.

ಒಳಚರಂಡಿ ನೀರಿನ ಹರಿಯುವಿಕೆ ಆಧುನೀಕರಣಕ್ಕೆ, ಆನಂದ್ ರಾವ್ ಫ್ಲೈಓವರ್ ಪಕ್ಕ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ಒಟ್ಟಿಗೆ ತರಲು 24 ಮಹಡಿಗಳ ಅವಳಿ ಟವರ್ ಗಳು, ಈ ಎರಡೂ ಕಟ್ಟಡಗಳ ಎರಡೂ ಬದಿಗಳಲ್ಲಿ ಫ್ಲೈಓವರ್ ಅಥವಾ ಬ್ರಿಡ್ಜ್ ನ್ನು ವಿಧಾನಸೌಧಕ್ಕೆ ಸಂಪರ್ಕಿಸಲು, ಉತ್ತಮ ಆಡಳಿತಕ್ಕೆ ಬ್ರಿಡ್ಜ್ ನಿರ್ಮಾಣ ಒಳಗೊಂಡಿದೆ. ರಸ್ತೆ ಮತ್ತು ಸಂಚಾರಕ್ಕೆ ಸಂಬಂಧಪಟ್ಟ ಘೋಷಣೆಯನ್ನು ಸಹ ಸಿಎಂ ಘೋಷಿಸುವ ನಿರೀಕ್ಷೆಯಿದೆ.

ತಮ್ಮ ಸರ್ಕಾರ 100 ದಿನಗಳ ಆಡಳಿತ ಪೂರ್ಣಗೊಳಿಸಿದ ನಂತರ ಸಿಎಂ ಯಡಿಯೂರಪ್ಪ, ಬೆಂಗಳೂರಿನ ದಿಕ್ಕನ್ನು ಬದಲಿಸಲಾಗುವುದು ಎಂದು ಹೇಳಿದ್ದರು. ನಂತರ ಕೊರೋನಾ ಲಾಕ್ ಡೌನ್ ಬಂತು. ಬಿಬಿಎಂಪಿಯ ಈಗಿನ ಆಡಳಿತಾವಧಿ ಕಳೆದ ಸೆಪ್ಟೆಂಬರ್ ಗೆ ಮುಕ್ತಾಯವಾಗಿದೆ. ಕೌನ್ಸಿ ಲ್ ನ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಇದರ ಜೊತೆಗೆ ಸರ್ಕಾರ ಪ್ರತ್ಯೇಕ ಬಿಬಿಎಂಪಿ ಮಸೂದೆಯನ್ನು ಬೆಂಗಳೂರಿಗೆ ತಂದು ವಾರ್ಡ್ ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಿದೆ.

ಬಿಬಿಎಂಪಿಯ ಚುನಾವಣೆ ವಿಳಂಬ ಪ್ರಶ್ನಿಸಿ ಕಾಂಗ್ರೆಸ್ ನ ಮಾಜಿ ಕೌನ್ಸಿಲರ್ ಹೈಕೋರ್ಟ್ ಮೊರೆ ಹೋಗಿದ್ದು, ಮೀಸಲಾತಿ ಅಧಿಸೂಚನೆ ಪ್ರಕಟಿಸಿದ 6 ವಾರಗಳೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಹೆಚ್ಚಿನ ಸಮಯಾವಕಾಶ ಬೇಕೆಂದು ಕೋರಿ ಇತ್ತೀಚೆಗೆ ಬಿಬಿಎಂಪಿ ಮಸೂದೆ ಹೊರಡಿಸಿದ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

SCROLL FOR NEXT