ರಾಜ್ಯ

ಪಡುಬಿದ್ರಿ ಬೀಚ್‌ ಡಿಸೆಂಬರ್ 17ರಿಂದ ಪ್ರವಾಸಿಗರಿಗೆ ಮುಕ್ತ

Lingaraj Badiger

ಮಂಗಳೂರು: ಉಡುಪಿ ಜಿಲ್ಲೆಯ ಪಡುಬಿದ್ರಿ ಬ್ಲೂಫ್ಲಾಗ್ ಬೀಚ್ ಅನ್ನು ಡಿಸೆಂಬರ್ 17ರಿಂದ ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ಮುಕ್ತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೇಂದ್ರ ಪರಿಸರ ಸಚಿವಾಲಯ ಮತ್ತು ಸೊಸೈಟಿ ಆಫ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೇಜ್ಮೆಂಟ್ ಸಹಕಾರದೊಂದಿಗೆ  ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಸುಸಜ್ಜಿತ ಬೀಚ್‌ ಆಗಿ ಅಭಿವೃದ್ಧಿಪಡಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದ್ದಾರೆ.

ಬೀಚ್‌ನಲ್ಲಿ ಬ್ಯಾಂಬೂ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿತ್ತು. ಇದೀಗ ಕಾಮಗಾರಿ ಮುಕ್ತಾಯವಾಗಿದ್ದು, ಮತ್ತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬ್ಲೂಫ್ಲಾಗ್ ಬೀಚ್‌.

ಪಡುಬಿದ್ರಿ ಬೀಚ್ ಅಕ್ಟೋಬರ್ 11 ರಂದು ದೇಶದ ಇತರ ಏಳು ಕಡಲತೀರಗಳೊಂದಿಗೆ ಬ್ಲೂಫ್ಲಾಗ್ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ.

SCROLL FOR NEXT