ರಾಜ್ಯ

ಇಂದಿನಿಂದ ಏಷ್ಯಾದ ಅತಿ ದೊಡ್ಡ ಕೇಕ್ ಶೋ: ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ ಸೆಂಟ್ ಜೋಸೆಫ್ ಆಟದ ಮೈದಾನ!

Manjula VN

ಬೆಂಗಳೂರು: ಕೋವಿಡ್ 19 ಸೋಂಕಿನಿಂದ ಕಳೆದ 8–9 ತಿಂಗಳಿಂದ ಶಾಲಾ, ಕಾಲೇಜುಗಳು ತೆರೆಯದೇ ಸ್ನೇಹಿತರಿಂದ ದೂರ ಇದ್ದ ಮಕ್ಕಳಿಗಾಗಿಯೇ ಈ ಬಾರಿ ನಗರದ ಸೆಂಟ್ ಜೋಸೆಫ್ ಆಟದ ಮೈದಾನದಲ್ಲಿ ಇಂದಿನಿಂದ ಆಕರ್ಷಕ ಕೇಕ್ ಶೋ ಆಯೋಜಿಸಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕೇಕ್ ಉತ್ಸವ ಆಯೋಜಿಸಿದ್ದು, 46 ನೇ ವರ್ಷದ ಈ ಕೇಕ್ ಶೋನಲ್ಲಿ ಮಕ್ಕಳನ್ನು ರಂಜಿಸಲು, ಆಕರ್ಷಿಸಲು ವಿಶೇಷ ವಸ್ತು ವಿನ್ಯಾಸಗಳನ್ನು ರೂಪುಗೊಳಿಸಲಾಗಿದೆ. ಜನವರಿ 3 ರ ವರೆಗೆ ನಡೆಯಲಿರುವ ಕೇಕ್ ಶೋ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಕೊರೋನಾ ಸೋಂಕು ನಿಯಂತ್ರಣ ಸಂದೇಶ ಸಾರುವ ಅಂಶಗಳಿಗೂ ಸಹ ಈ ಬಾರಿ ಒತ್ತು ನೀಡಿದ್ದು, ಈ ವರ್ಷ ಸಹ ಲಕ್ಷಾಂತರ ಜನರನ್ನು ಕೇಕ್ ಶೋ ಸೆಳೆಯಲಿದೆ.

ಮಕ್ಕಳ ಮೆಚ್ಚಿನ ಸಂಗೀತ ಪ್ರಿಯ ದೊರೆಮನ್, ಮಾಯಾ ಕಾರು, ಮಕ್ಕಳ ತಳ್ಳುಬಂಡಿ, ದಿ ಲಯನ್ ಕಿಂಗ್ ಚಿತ್ರದಲ್ಲಿ ಎದ್ದು ಕಾಣುವ ಸಿಂಹ ರಾಜನ ಬಂಡೆ, ಚಿನ್ನದ ಡ್ರಾಗನ್, ಭೂತದ ನೃತ್ಯ, ಮೈಕ್ ಒಸೊಸ್ಕಿ, ವಾಲುತ್ತಿರುವ ಪೀಸಾಗೋಪು, ಕ್ರಿಸ್ ಮಸ್ ಸಂಭ್ರಮಕ್ಕೆ ಮೆರಗು ನೀಡುವ ಯೇಸುಕ್ರಿಸ್ತನ ಜನನದ ಪ್ರತಿರೂಪಗಳು ಇಲ್ಲಿ ಮೈದಳೆದಿವೆ.

ಕಣ್ಮನ ಸೆಳೆಯುವ ಐಫೆಲ್ ಟವರ್, ಕೊರೋನಾ ವೈರಸ್ ನ ಪ್ರತಿಬಿಂಬ, ವಾಲುತ್ತಿರುವ ಪೀಸಾ ಗೋಪುರ, ಮಹಾ ನಾಯಕ – ಮಹಾ ಗಣಗೇಶ, ನಟರಾಜ ದೇವರು, ಗೋಲ್ಡನ್ ಡ್ರಾಗನ್, ಗಾಂಧಾರ ಲೋಕ, ಜಿಯೋ ಶಾಂಡಿಲಿಯರ್, ನೃತ್ಯ ಮಾಡುತ್ತಿರುವ ಜೋಕರ್, ಅರಣ್ಯದ ಶಕ್ತಿ ಸೆಂಟಾರರ್, ಕಪ್ಪು ದಿರುಸಿನಲ್ಲಿ ನ ವ ವಧು, ಶ್ವೇತ ವರ್ಣದ ಮದುವೆ ಕೇಕ್, ಜೆ.ಕೆ.ರಾಲಿಂಗ್ ಪುಸ್ತಕ, ಚಿಟ್ಟೆ ಕೇಕ್, ಲಂಡನ್ ನ ಕೆರೋಸೆಲ್, ಮಿನುಗುವ ಕಾರು ಈ ಬಾರಿಯ ಕೇಕ್ ಶೋನ ವೈಶಿಷ್ಟ್ಯಗಳು.

SCROLL FOR NEXT