ಶಶಿಕಲಾ 
ರಾಜ್ಯ

ದಂಡ ಪಾವತಿಸಿದ ನಂತರ ಶಶಿಕಲಾ ಸಂಬಂಧಿ ಸುಧಾಕರನ್ ಬಿಡುಗಡೆ: ಕೋರ್ಟ್ ಆದೇಶ

ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಅವರ ಸೋದರ ಸಂಬಂಧಿ  ವಿಎನ್ ಸುಧಾಕರನ್ ಅವರ ಜೈಲುವಾಸ ಅವಧಿ ಪೂರ್ಣಗೊಂಡಿದ್ದು ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬೆಂಗಳೂರು:  ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲುವಾಸದಲ್ಲಿರುವ ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಅವರ ಸೋದರ ಸಂಬಂಧಿ  ವಿಎನ್ ಸುಧಾಕರನ್ ಅವರ ಜೈಲುವಾಸ ಅವಧಿ ಪೂರ್ಣಗೊಂಡಿದ್ದು ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸುಧಕಾರನ್ ಕಾರಾಗೃಹವಾಸ ಪೂರ್ಣವಾಗಿದ್ದು, ದಂಡದ ಮೊತ್ತ ಪಾವತಿ ಮಾಡಿದ ನಂತರ ಆತ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಧಾಕರನ್ ಪರವ ವಕೀಲರು ಅವಧಿಗೂ ಮುನ್ನ ಬಿಡುಗಡೆಗಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸುಧಾಕರನ್ ಅವರಿಗೆ ಜೈಲುವಾಸದ ಸಮಯದಲ್ಲಿ ಪೆರೋಲ್ ನೀಡಿರಲಿಲ್ಲ, ಅಲ್ಲದೆ, 1997 ರಲ್ಲಿ ಸುಧಾಕರನ್ ಏಳು ದಿನಗಳು, 2001 ರಲ್ಲಿ 92 ದಿನಗಳು ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 24 ದಿನಗಳು ಇದ್ದ ಬಗ್ಗೆ ವಕೀಲರು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದರು.

ಫೆಬ್ರವರಿ 15, 2017 ರಿಂದ ಜೈಲು ಶಿಕ್ಷೆ ಅನುಭವಿಸುವುದರ ಜೊತೆಗೆ, ಅವರ ಅವಧಿ ನಾಲ್ಕು ತಿಂಗಳಿಗಿಂತ ಹೆಚ್ಚಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.  ನ್ಯಾಯಾಲಯವು ಗುರುವಾರ, ನ್ಯಾಯಾಲಯವು ವಿಧಿಸಿದ 10 ಕೋಟಿ ರು. ಹಣವನ್ನು ದಂಡವಾಗಿ ಪಾವತಿಸಿದ ನಂತರ ಅವರನ್ನು ಬಿಡುಗಡೆಮಾಡಲು ಕೋರ್ಟ್ ಸೂಚಿಸಿದೆ,

ಮುಂದಿನ ವಾರ ಸುಧಾಕರನ್ ಅವರ ಸಲಹೆಗಾರರು ನ್ಯಾಯಾಲಯಕ್ಕೆ ಕರಡು ಪ್ರತಿ ಸಲ್ಲಿಸಲು ವ್ಯವಸ್ಥೆ ಮಾಡಿದ್ದಾರೆ ಮತ್ತು ಅವರ ಶೀಘ್ರ ಬಿಡುಗಡೆಗೆ ಅನುಕೂಲವಾಗಿದೆ ಎಂದು ತಿಳಿದುಬಂದಿದೆ. ಶಶಿಕಲಾ ಮತ್ತು ಇಳವರಸಿ  ವಕೀಲರು ನವೆಂಬರ್‌ನಲ್ಲಿ ದಂಡ ಪಾವತಿಸಿದ್ದು , ಅವರನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್