ರಾಜ್ಯ

ಚಾಮರಾಜನಗರ: ಜನವರಿ 5 ರಿಂದ 7 ರ ವರೆಗೆ ಹಕ್ಕಿ ಹಬ್ಬ

Srinivasamurthy VN

ಚಾಮರಾಜನಗರ: ಎರಡು ಹುಲಿ ಸಂರಕ್ಷಿತ ಪ್ರದೇಶ ಹೊಂದುವ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗಮನ ಸೆಳೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ೨೦೨೧ ರಜ.೫ರಿಂದ ೭ರ ವರಗೆ ‘ಬರ್ಡ್ ಫೆಸ್ಟಿ ವಲ್’(ಹಕ್ಕಿ ಹಬ್ಬ) ನಡೆಯಲಿವೆ. 


ರಂಗನತಿಟ್ಟು, ದಾಂಡೇಲಿ ,ಬಳ್ಳಾರಿ, ಮಂಗಳೂರು, ಚಿಕ್ಕಬಳ್ಳಾಪುರ ಮತ್ತು ಕಾರವಾರದಲ್ಲಿ ಈಗಾಗಲೇ ಯಶಸ್ವಿಯಾಗಿರುವ ಈ ಹಬ್ಬ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ವಿಶೇಷವೆಂದರೆ ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಬೆಸೆಯುವ , ವಿವಿಧ  ಮಾದರಿಯ ಅರಣ್ಯವನ್ನು ಹೊಂದಿರುವ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ( ಬಿಆರ್‌ಟಿ) ಹುಲಿಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ಹಕ್ಕಿಗಳ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.


ಅಳಿವಿನಂಚಿನಲ್ಲಿರುವ ಹಕ್ಕಿಗಳ ಸಂತತಿ ಸಂರಕ್ಷಣೆ ಹಾಗೂ ಅಧ್ಯಯನ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಜ.೫ರಿಂದ ೭ರವರೆಗೆ ‘ಹಕ್ಕಿ ಹಬ್ಬ’ ನಡೆಯಲಿದೆ. ಹಕ್ಕಿಗಳ ಕುರಿತು ಆಸಕ್ತರಿಗೆ ಹಾಗೂ ಅಧ್ಯಯನಶೀಲರಿಗೆ ಪ್ರಯೋಜನವಾಗಲಿ ಎಂಬ  ಉದ್ದೇಶದೊಂದಿಗೆ ಸ್ಥಳೀಯರಲ್ಲೂ ಪರಿಸರ-ಹಕ್ಕಿಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಕ್ಕಿ ಹಬ್ಬ ಆಯೋಜಿಸಲಾಗಿದೆ. 

ರಾಜ್ಯದ ೭ನೇ ಹಕ್ಕಿಹಬ್ಬವನ್ನು ಜ.೫ ರಿಂದ೭ ರವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ವಿವಿಧಡೆಯಿಂದ ಹಕ್ಕಿಗಳ ಕುರಿತ ಆಸಕ್ತರು ಭಾಗವಹಿಸುವರು. ಬಿಆರ್‌ಟಿಯ ೭ ಮಾರ್ಗದಲ್ಲಿ ಸಂಚರಿಸಿ ಹಕ್ಕಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುವುದು.
- ಮನೋಜ್‌ಕುಮಾರ್, ಸಿಸಿಎಫ್, ಚಾಮರಾಜನಗರ ವೃತ್ತ. 

ಅಳಿವಿನ ಅಂಚಿನಲ್ಲಿರುವ ಈ ಹಕ್ಕಿಗಳ ಮೇಲಿನ ಅಧ್ಯಯನದ ಕುರಿತು ಅರಿವು ಮೂಡಿಸಲು ಈ ಹಬ್ಬ ಆಚರಿಸಲಾಗುತ್ತಿದೆ. ಬಿಆರ್‌ಟಿಯಲ್ಲಿ ವಿವಿಧ ಜಾತಿಯ ಹಕ್ಕಿಗಳನ್ನು ಕಾಣಬಹುದಾಗಿದ್ದು, ಈ ಭಾಗದ ಸೋಲಿಗರಿಗೆ ಹಕ್ಕಿಗಳ ಬಗ್ಗೆ ಅಪಾರ ಜ್ಞಾನವಿದೆ. ಅದನ್ನು ಪರಿಚಯಿಸುವ ಕೆಲಸವು  ಹಕ್ಕಿಹಬ್ಬದ ಮೂಲಕ ಆಗಬೇಕಿದೆ. 
- ಸಮೀರಾ ಅಗ್ನಿಹೋತ್ರಿ, ಪಕ್ಷಿ ಸಂಶೋಧಕಿ

ವರದಿ: ಗುಳಿಪುರ ಎಂ.ನಂದೀಶ್

SCROLL FOR NEXT