ರಾಜ್ಯ

ಚಾಮರಾಜನಗರ: ಎರಡನೇ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ 

Srinivas Rao BV

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿ ಧಾಮದ ಪಿ ಜಿ ಪಾಳ್ಯ ವಲಯದಲ್ಲಿ ಹುಲಿ ಗಣತಿಗೆ ಹಾಕಲಾಗಿದ್ದ ಕ್ಯಾಮೆರಾದಲ್ಲಿ ಕರಿ ಚಿರತೆಯೊಂದು ಸೆರೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು, ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಿಚಿರತೆ ಸೆರೆಯಾಗಿ, ಅದು ಚಾಮರಾಜನಗರದ ಬಘೀರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದೇ ಬಘೀರಾನೆ ಸೆರೆಯಾಗಿರುವ ಸಾಧ್ಯತೆ ದಟ್ಟವಾಗಿದೆ.

ಕಳೆದ ಬಾರಿಯೂ ಮಲೆಮಹದೇಶ್ವರ ವನ್ಯಜೀವಿ ಧಾಮದ ಅಂಚಿನಲ್ಲಿ ಚಿರತೆ ಕಾಣಿಸಿತ್ತು. ಅದು ತನ್ನ ಆವಾಸ ಸ್ಥಾನ ವಿಸ್ತರಿಸಿ ನಮ್ಮ ವನ್ಯಜೀವಿ ಧಾಮಕ್ಕೆ ಬರಬಹುದು ಎಂದುಕೊಂಡಿದ್ದೆವು.

ನಮ್ಮ ಅರಣ್ಯದಲ್ಲಿ ಕಾಡೆಮ್ಮೆ, ಜಿಂಕೆ, ಕಡವೆ ಮುಂತಾದ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದ್ದು, ಚಿರತೆ ಬಂದಿರಬಹುದು. ಇಲ್ಲವೇ, ಇದೇ ಬೇರೆ ಚಿರತೆ ಆಗಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ವರದಿ: ಗುಳಿಪುರ ನಂದೀಶ

SCROLL FOR NEXT