ರಾಜ್ಯ

ಗೋಮಾಂಸ ಹೇಳಿಕೆ: ಬಹಿರಂಗ ಕ್ಷಮೆಯಾಚಿಸುವಂತೆ ಸಿದ್ದರಾಮಯ್ಯಗೆ ಕೊಡವ ಸಮಾಜದ ಮಹಿಳೆಯರ ಆಗ್ರಹ

Manjula VN

ಮಡಿಕೇರಿ: ಕೊಡವರು ಗೋಮಾಂಸ ಸೇವಿಸುತ್ತಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆನಯ್ನು ತೀವ್ರವಾಗಿ ಖಂಡಿಸಿರುವ ಕೊಡವ ಸಮಾಜದ ಮಹಿಳೆಯರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ. 

ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಮಹಿಳೆಯರು ಹಾಗೂ ವಿವಿಧ ಕೊಡವ ಸಮಾಜ ಹಾಗೂ ಸಂಘಟನೆಯ ಪ್ರಮುಖರು ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಎಂದು ಸೋಮವ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಕೊಡಗು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು. 

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ಞಾವಂತಿಕೆಯಲ್ಲಿ ಮಾತನಾಡಬೇಕು. ಕೊಡಗಿನಲ್ಲಿ ಗೋವುಗಳನ್ನು ಪೂಜಾನೀಯ ಭಾವದಲ್ಲಿ ಆರಾಧಿಸುತ್ತವೆ. ಎತ್ತು ಪೋರಾಟ ನಡೆಸುತ್ತೇವೆ. ಗೃಹ ಪ್ರವೇಶದ ವೇಳೆ ಗೋವನ್ನು ಪೂಜಿಸುತ್ತೇವೆ. ಇದನ್ನು ತಿಳಿಯದ ಸಿದ್ದರಾಮಯ್ಯ ಅವರು ಮನಬಂದಂತೆ ಕೊಡವರ ಭಾವನೆಯನ್ನು ಚ್ಯುತಿ ತಂದಿದ್ದಾರೆ. ಕೊಡವರ ಭಾವನೆಯನ್ನು ಸಿದ್ದರಾಮಯ್ಯ ಅವರು ಕೆರಳಿಸಿದ್ದಾರೆ. ಹಗುರವಾದ ಹೇಳಿಕೆಯನ್ನು ನೀಡುವ ಮೂಲಕ ತೇಜೋವಧಿ ಮಾಡಿದ್ದಾರೆ. 

ಹೇಳಿಕೆಯನ್ನು ನೀಡಿ ಕ್ಷಮೆಯಾಚಿಸದೆ ಪ್ರಕರಣದಿಂದ ತಪ್ಪಿಸಿಕೊಳ್ಳಲು, ವಿಷಾದ ವ್ಯಕ್ತಪಡಿಸುತ್ತಿದ್ದೇನೆಂದು ಟ್ವೀಟ್ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಪ್ರಧಾನಮಂತ್ರಿಗಳೂ ಕೂಡ ಖಂಡಿಸಿದ್ದು, ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಅಮ್ಮಾತಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ ಅವರು ಹೇಳಿದ್ದಾರೆ.

ಈ ನಡುವೆ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿ ಕುಶಾಲಪ್ಪ ಅವರು ಮಡಿಕೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

SCROLL FOR NEXT