ರಾಜ್ಯ

ಕೋವಿಡ್ -19: ಬ್ರಿಟನ್ ನಿಂದ ವಾಪಸ್ ಆಗಿ ತಪ್ಪಿಸಿಕೊಂಡವರ ವಿರುದ್ಧ ಪೊಲೀಸ್ ಕ್ರಮದ ಸುಳಿವು ನೀಡಿದ ಸುಧಾಕರ್

Lingaraj Badiger

ಬೆಂಗಳೂರು: ಬ್ರಿಟನ್ ನಿಂದ ನಗರಕ್ಕೆ ವಾಪಸ್ ಆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಸುಳಿವು ನೀಡಿದ್ದಾರೆ.

ನಾಪತ್ತೆಯಾಗಿರುವವ ವಿರುದ್ಧ ಪೊಲೀಸ್ ಕ್ರಮವೂ ತೆಗೆದುಕೊಳ್ಳಬಹುದು ಎಂದು ಸಚಿವರು ಹೇಳಿದ್ದಾರೆ.

ಜವಾಬ್ದಾರಿಯುತ ನಾಗರಿಕರಾಗಿ ನಮ್ಮೊಂದಿಗೆ ಸಹಕರಿಸುವಂತೆ ಬ್ರಿಟನ್ ನಿಂದ ಹಿಂದಿರುಗಿದವರಿಗೆ ನಾನು ವಿನಂತಿ ಮಾಡುತ್ತೇನೆ. ನೀವು ಪರೀಕ್ಷೆಗೆ ಒಳಗಾಗಬೇಕು. ನೀವು ಪರೀಕ್ಷೆಗೆ ಒಳಗಾಗದಿದ್ದರೆ ಮತ್ತು ನಿಮ್ಮ ಫೋನ್ ಸ್ವಿಚ್ ಆಫ್ ಮಾಡದಿದ್ದರೆ, ಅದು ನಿಜವಾದ ಅರ್ಥದಲ್ಲಿ ಅಪರಾಧವಾಗುತ್ತದೆ ಎಂದು ಸುಧಾಕರ್ ವರದಿಗಾರರಿಗೆ ತಿಳಿಸಿದ್ದಾರೆ.

ಬ್ರಿಟನ್ ನಿಂದ ಬಂದವರ ಪೈಕಿ ಅನೇಕರು ಇನ್ನೂ ಪತ್ತೆ ಆಗಿಲ್ಲ. ಅನೇಕರು ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಸಂಬಂಧ ನಾನು ಸಂಪುಟ ಸಭೆಯ ನಂತರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.

ತಪ್ಪಿಸಿಕೊಂಡಿರುವವರ ವಿರುದ್ಧ 0ಪೊಲೀಸ್ ಕೇಸ್ ದಾಖಲಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, "ನಾನು ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ ಮತ್ತು ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇನೆ ಎಂದು ತಿಳಿಸಿದ್ದಾರೆ.

SCROLL FOR NEXT