ರಾಜ್ಯ

ಪ್ರಧಾನಿ ಮೋದಿ ಗಡ್ಡಕ್ಕೂ ಅಯೋಧ್ಯೆ ರಾಮಮಂದಿರಕ್ಕೂ ಸಂಬಂಧವಿದೆಯಾ: ಪೇಜಾವರ ಶ್ರೀ ಹೇಳಿದ್ದೇನು?

Vishwanath S

ಬಾಗಲಕೋಟೆ: ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಈ ಕುರಿತಂತೆ ಪೇಜಾವರ ಶ್ರೀಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ರಾಮ ಮಂದಿರ ನಿರ್ಮಾಣಕ್ಕೆ ಕಾಣಿಕೆ ಸಂಗ್ರಹಣೆಗೆ ಚಾಲನೆ ನೀಡಿ ಮಾತನಾಡಿದ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು, ನಮ್ಮಲ್ಲಿ ದೇವಸ್ಥಾನದ ಕಾರ್ಯ ಇಂತಹದ್ದೆಲ್ಲ ಇರುವಾಗ ನಾವು ದೀಕ್ಷಾ ಬದ್ಧರಾಗುತ್ತೇವೆ.

ಈ ವೇಳೆ ಸಾಮಾನ್ಯವಾಗಿ ಗಡ್ಡ ಮತ್ತು ಕೇಶವನ್ನು ತೆಗೆಯುವುದಿಲ್ಲ. ಇನ್ನು ಅಯೋಧ್ಯೆ ರಾಮಮಂದಿರಕ್ಕೆ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಹೀಗಾಗಿ ಅವರು ರಾಮಮಂದಿರ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿರಬಹುದು ಎಂದರು. 

ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಅವರೇ ಹೊತ್ತಿರುವುದರಿಂದ ಸಹಜವಾಗಿ ಇಂತಹ ಕಾರ್ಯದ ಸಮಯದಲ್ಲಿ ನಮ್ಮಲ್ಲಿ ಕೇಶಾದಿಗಳನ್ನು ತೆಗೆಯುವುದಿಲ್ಲ. ನೈತಿಕ ನೆಲೆಯಲ್ಲಿ ನಮ್ಮಲ್ಲಿ ಮಂದಿರ ಆಗುವ ತನಕ ಗಡ್ಡ, ತಲೆಗೂದಲು ಬಿಟ್ಟಿರುತ್ತೇವೆ. ಪ್ರಾಯಶಃ ಪ್ರಧಾನಿ ಮೋದಿ ಅದನ್ನು ಪಾಲನೆ ಮಾಡುತ್ತಿರಬಹುದು ಎಂದು ಹೇಳಿದರು. 

SCROLL FOR NEXT