ರಾಜ್ಯ

ಅನುದಾನ ಬಳಕೆ ಮಾಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ರಾಜ್ಯ ಸರ್ಕಾರ ಅಸಮಾಧಾನ

Srinivas Rao BV

ಬೆಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2019-20 ಬಜೆಟ್ ನಲ್ಲಿ ನೀಡಲಾಗಿದ್ದ ಹಣವನ್ನು ಪೂರ್ತಿ ಬಳಕೆ ಮಾಡದೇ ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. 

ಬಿಡುಗಡೆಯಾಗಿದ್ದ ಅನುದಾನವನ್ನು ಪೂರ್ತಿ ಹಣವನ್ನು ಬಳಕೆ ಮಾಡದೇ ಹೊಸ ಪ್ರಸ್ತಾವನೆಗಳನ್ನು ಮುಂದಿಡಬೇಡಿ ಎಂದು ಹಣಕಾಸು ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಹೇಳಿದ್ದಾರೆ. 

2019-20 ಬಜೆಟ್ ನಲ್ಲಿ ನೀಡಲಾಗಿದ್ದ ಅನುದಾನಗಳ ಬಳಕೆ ಬಗ್ಗೆ ಪರಿಶೀಲನೆ ನಡೆಸಿದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನ ಬಳಕೆ ಮಾಡದೇ ಇರುವುದು ಬೆಳಕಿಗೆ ಬಂದಿದೆ. 2018-19 ಅಷ್ಟೇ ಅಲ್ಲದೇ ಅದಕ್ಕೆ ಹಿಂದೆ ಬಿಡುಗಡೆ ಮಾಡಲಾದ ಅನುದಾನದಗಳನ್ನೂ ಇಲಾಖೆ ಬಳಕೆ ಮಾಡಿಲ್ಲ. 

ರಾಜ್ಯ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಲಾಖಾವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಇಲಾಖೆಗಳೂ ಸಹ ಹೊಸ ಯೋಜನೆಗಳಿಗೆ ಪ್ರಸ್ತಾವನೆ ನೀಡುತ್ತಿವೆ.

SCROLL FOR NEXT