ರಾಜ್ಯ

ಹೊಸಪೇಟೆ: ಬಗೆ ಹರಿಯದೆ ಕಗ್ಗಂಟಾಗಿ ಉಳಿದ ಮೈಲಾರ ಲಿಂಗೇಶ್ವರ ದೇವಸ್ಥಾನದ ವಿವಾದ

Srinivas Rao BV

ಹೊಸಪೇಟೆ: ಮೈಲಾರ ಲಿಂಗೇಶ್ವರ ದೇವಸ್ಥಾನದ ವಿವಾದ ಬಗೆಹರಿಯದೆ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. 

ವೆಂಕಪ್ಪಯ್ಯ ಒಡೆಯರ್ ತನಗೆ ಬೇಕಾದ ಕಾರ್ಣಿಕದ ಗೊರವಯ್ಯನನ್ನೇ ನೇಮಕ ಮಾಡಯವಂತೆ ಪಟ್ಟು ಹಿಡಿದಿದ್ದಾರೆ. 
ಕಳೆದ ಮೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲಾಡಳಿತ ನೇಮಕಮಾಡಿದ ರಾಮಪ್ಪ ಗೊರವಯ್ಯನೇ ಕಾರ್ಣಿಕ ನುಡಿಯುತಿದ್ದಾನೆ ಈ ವರ್ಷ ಗೊರವಯ್ಯ ರಾಮಪ್ಪನನ್ನ ಬದಲಿಸುವಂತೆ ಪಟ್ಟು ಹಿಡಿದು ಧರ್ಮದರ್ಶಿ ವೆಂಕಪ್ಪಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಆದರೆ ರಾಮಪ್ಪ ಅವರನ್ನೇ ಕಾರ್ಣಿಕದ ಗೊರವಯ್ಯನನ್ನಾಗಿ ಮುಂದುವರೆಸುವಂತೆ ಧಾರವಾಡ ಹೈಕೋರ್ಟ್ ಆದೇಶ ನೀಡಿತ್ತು. ರಾಮಪ್ಪ ಪರ ಆದೇಶಕ್ಕೆ ವೆಂಕಪ್ಪಯ್ಯ ಒಡೆಯರ್ ಅಸಮಾಧಾನಗೊಂಡಿದ್ದು ಕಂಕಣ ಕಟ್ಟಿ ಜಾತ್ರೆಗೆ ಚಾಲನೆ ನೀಡುವುದನ್ನು ನಿರಾಕರಿಸಿದ್ದಾರೆ. 

"ನನ್ನ ಮತಿಗೆ ಬೆಲೆ ಸಿಗದಿದ್ದರೆ ಕಂಕಣ ಕಟ್ಟುವುದಿಲ್ಲ ಜಾತ್ರೆಗೆ ಚಾಲನೆ ನೀಡುವುದಿಲ್ಲ" ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿಗಳು ವೆಂಕಪ್ಪಯ ಒಡೆಯರ್ ಮನವಲಿಕೆಗೆ ಯತ್ನಿಸುತ್ತಿದ್ದಾರೆ. 

ಕಳೆದ ವರ್ಷವೂ ಧರ್ಮದರ್ಶಿಗಳು ಇದೇ ರೀತಿ ಪಟ್ಟು ಹಿಡಿದಿದ್ದರ ಪರಿಣಾಮ ದೇವಸ್ಥಾನದ ಅರ್ಚಕರಿಂದ ಕಂಕಣ ಕಟ್ಟಿಸಿ ಜಾತ್ರೆಗೆ ಚಾಲನೆ ನೀಡಿತ್ತು

ಈ ಬಾರಿ ಕೂಡ ದೇವಸ್ಥಾನದ ಅರ್ಚಕರು ಕಂಕಣ ಕಟ್ಟುವಂತೆ ಜಿಲ್ಲಾಡಳಿತ ಆದೇಶ ನೀಡಿದೆಯಾದರೂ ಅದನ್ನು ದೇವಸ್ಥಾನದ ಅರ್ಚಕರು ವಿರೋಧಿಸಿದ್ದಾರೆ. ಜಿಲ್ಲಾಡಳಿತ ಈಗಿರುವ ಅರ್ಚಕರನ್ನ ಬದಲಿಸಿ ಬೇರೆ ಅರ್ಚಕರನ್ನ ನೇಮಿಸಿ ಜಾತ್ರೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ. ಫೆಬ್ರವರಿ 11  ರಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಲಿದ್ದು, ಇಂದಿನಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳು ಪ್ರಾರಂಭವಾಗಲಿವೆ.

SCROLL FOR NEXT