ರಾಜ್ಯ

ಚಿತ್ರದುರ್ಗ: ಲಾರಿ ಟೈರ್ ಸ್ಫೋಟ, ದಂಪತಿ ಸಾವು

Raghavendra Adiga

ಚಿತ್ರದುರ್ಗ: ಚಲಿಸುತ್ತಿದ್ದ ಲಾರಿಯ ಟೈರ್ ವೊಂದು ಸ್ಫೋಟಗೊಂಡ ಪರಿಣಾಮ ಚಕ್ರದ ಡಿಸ್ಕ್ ಸಿಡಿದು ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿ ನಡೆದಿದೆ.

ಬೆಳಗ್ಗೆ ಸುಮಾರು 11 ಗಂಟೆಯ ವೇಳೆ ನಡೆದ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ 45 ವರ್ಷದ ತಿಪ್ಪೇಸ್ವಾಮಿ, ಶಿವಮ್ಮ(42) ಮೃತ ದಂಪತಿ.

ಆಂಧ್ರಪ್ರದೇಶ ಮೂಲದ ಲಾರಿ ಟೈರ್ ಸ್ಫೋಟಗೊಂಡು ಚಕ್ರದ ಡಿಸ್ಕ್ ಅವರಿಗೆ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ಘಟನೆ ಬಗೆಗೆ ಮಾಹಿತಿ ತಿಳಿದ ಚಳ್ಲಕೆರೆ ಪೋಲೀಸರು ಸ್ಥಳಕ್ಕೆ ಧಾವಿಸಿ ,ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

SCROLL FOR NEXT