ರಾಜ್ಯ

ರಸ್ತೆ ಗುಂಡಿ ವಿವಾದ; ಹೈಕೋರ್ಟ್ ಗೆ ಬೇಷರತ್ ಕ್ಷಮೆಯಾಚಿಸಿದ ಬಿಬಿಎಂಪಿ

Nagaraja AB

ಬೆಂಗಳೂರು: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆಗೆ ಸಂಬಂಧಿಸಿದಂತೆ ನೀಡಿರುವ ಆದೇಶ ಪಾಲಿಸದ ಬಿಬಿಎಂಪಿ ಹೈಕೋರ್ಟ್ ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ

 ಸರ್ಕಾರ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ  ಕೋರಮಂಗಲದ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಂಗಳವಾರ  ಮುಖ್ಯ ನ್ಯಾಯಮೂರ್ತಿ ಎ. ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ  ವಿಚಾರಣೆಗೆ ಬಂದಿತ್ತು

ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯ ನೀಡಿದ್ದನ್ನು ಮೇಯರ್ ಹಾಗೂ  ಉಪ ಮೇಯರ್, ಆಡಳಿತ ಪಕ್ಷದ ನಾಯಕರು ಹಾಗೂ ಸ್ಥಾಯಿ ಸಮಿತಿ (ಬೃಹತ್ ಕಾಮಗಾರಿ), ಆರ್ಥಿಕ  ಹಾಗೂ ತೆರಿಗೆ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ,ವಿರೋಧ ಪಕ್ಷದ ನಾಯಕರ  ಮುಂದಿಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಪ್ರಮಾಣಪತ್ರ ಸಲ್ಲಿಸಿದ್ದರು.

ಇದಕ್ಕೆ ಕೆಂಡಾಮಂಡಲವಾಗಿದ್ದ ನ್ಯಾಯಪೀಠ, ಹೈಕೋರ್ಟ್ ಆದೇಶ ಪಾಲಿಸುವುದನ್ನು ಬಿಟ್ಟು  ಈ ರೀತಿ ಏಕೆ ಚರ್ಚೆ ನಡೆಸಿದ್ದೀರಿ. ಹೀಗೆ ಮುಂದುವರಿದರೆ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವುದಾಗಿ ಎಚ್ಚರಿಕೆ ನೀಡಿತ್ತು

SCROLL FOR NEXT